ನೆಹರು-ಗಾಂಧಿ ಕುಟುಂಬದ ಬಗ್ಗೆ ಠಾಕೂರ್ ಹೇಳಿಕೆಗೆ ವಿರೋಧ: ಲೋಕಸಭೆಯ ಕಲಾಪ 4 ಬಾರಿ ಮುಂದೂಡಿಕೆ

ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿ-ಎಂ ಕೇರ್ಸ್ ವಿಷಯದಲ್ಲಿ ನೆಹರು-ಗಾಂಧಿ ಅವರ ಕುಟುಂಬದ ಹೆಸರನ್ನು ಉಲ್ಲೇಖಿಸಿ ನೀಡಿದ ಹೇಳಿಕೆಗೆ ವ್ಯಕ್ತವಾದ ವಿರೋಧದಿಂದ ಒಂದೇ ದಿನದಲ್ಲಿ ಲೋಕಸಭೆಯನ್ನು ನಾಲ್ಕು ಬಾರಿ ಮುಂದೂಡುವಂತಾಯಿತು. 
ಅನುರಾಗ್ ಠಾಕೂರ್
ಅನುರಾಗ್ ಠಾಕೂರ್

ನವದೆಹಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಪಿ-ಎಂ ಕೇರ್ಸ್ ವಿಷಯದಲ್ಲಿ ನೆಹರು-ಗಾಂಧಿ ಕುಟುಂಬದ ಹೆಸರನ್ನು ಉಲ್ಲೇಖಿಸಿ ನೀಡಿದ ಹೇಳಿಕೆಗೆ ವ್ಯಕ್ತವಾದ ವಿರೋಧದಿಂದ ಒಂದೇ ದಿನದಲ್ಲಿ ಲೋಕಸಭೆ ಕಲಾಪವನ್ನು ನಾಲ್ಕು ಬಾರಿ ಮುಂದೂಡುವಂತಾಯಿತು. 
 
ತೆರಿಗೆ ಮತ್ತು ಇತರ ಕಾನೂನುಗಳ ಮಸೂದೆಯ ಮಂಡನೆ ವೇಳೆ ಅನುರಾಗ್ ಠಾಕೂರ್ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯನ್ನು ಉಲ್ಲೇಖಿಸಿ, ಈ ಟ್ರಸ್ಟ್ ನ್ನು ಜವಾಹರ್ ಲಾಲ್ ನೆಹರು ಅವರು ಪ್ರಧಾನಿಯಾಗಿದ್ದಾಗ ಸ್ಥಾಪನೆಯಾಗಿತ್ತು. ಆದರೆ ಇದನ್ನು ಸಾರ್ವಜನಿಕ ಟ್ರಸ್ಟ್ ಎಂದು ನೋಂದಣಿ ಮಾಡದೇ ಇದ್ದರೂ ಸಹ ಎಫ್ ಸಿಆರ್ ಎ ಯೂ ಸೇರಿದಂತೆ ಅಗತ್ಯವಿದ್ದ ಎಲ್ಲಾ ಕ್ಲಿಯರೆನ್ಸ್ ಗಳೂ ದೊರೆಯಿತು. ಪಿಎಂ-ಕೇರ್ಸ್ ಫಂಡ್ ಸಾಂವಿಧಾನಿಕವಾಗಿ ಸ್ಥಾಪನೆಯಾಗಿರುವ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್, ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ನೆಹರು-ಗಾಂಧಿ ಏಕೈಕ ಕುಟುಂಬದ ಲಾಭಕ್ಕಾಗಿ ಸ್ಥಾಪನೆಯಾಗಿತ್ತು ಎಂದು ಠಾಕೂರ್ ಹೇಳಿದರು. 

ತಕ್ಷಣೆವೇ ಠಾಕೂರ್ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿತು, ಪರಿಣಾಮ ಸ್ಪೀಕರ್ ಓಂ ಬಿರ್ಲಾ ಕಪಾಲವನ್ನು ಮುಂದೂಡಿದರು. ಸಂಜೆ 6 ಕ್ಕೆ ಕಲಾಪ ಪುನಾರಂಭವಾದಾಗ, ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಠಾಕೂರ್, ನೋವುಂಟು ಮಾಡುವುದು ನನ್ನ ಹೇಳಿಕೆಯ ಉದ್ದೇಶವಾಗಿರಲಿಲ್ಲ. ಆದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com