'ಕೃಷಿ ಮಸೂದೆ ಹಿಂಪಡೆಯುವವರೆಗೆ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ': ಎಸ್‌ಎಡಿ
ಕೃಷಿ ಮಸೂದೆ ವಿರೋಧಿಸಿ ಎನ್ ಡಿಎ ಸರ್ಕಾರದಿಂದ ಹೊರ ಬಂದಿರುವ ಬಿಜೆಪಿಯ ಅತ್ಯಂತ ಹಳೆಯ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ(ಎಸ್‌ಎಡಿ) ಈಗ ಮೂರು ರೈತ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.
Published: 19th September 2020 06:17 PM | Last Updated: 19th September 2020 06:17 PM | A+A A-

ಸುಖ್ಬೀರ್ ಸಿಂಗ್ ಬಾದಲ್
ಚಂಡೀಗಢ: ಕೃಷಿ ಮಸೂದೆ ವಿರೋಧಿಸಿ ಎನ್ ಡಿಎ ಸರ್ಕಾರದಿಂದ ಹೊರ ಬಂದಿರುವ ಬಿಜೆಪಿಯ ಅತ್ಯಂತ ಹಳೆಯ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ(ಎಸ್‌ಎಡಿ) ಈಗ ಮೂರು ರೈತ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.
ರೈತರ ಪ್ರತಿಭಟನೆಯಲ್ಲಿ ತಮ್ಮ ಪಕ್ಷ ಮುಂಚೂಣಿಯಲ್ಲಿದೆ ಎಂದಿರು ಎಸ್‌ಎಡಿ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು, ರೈತ ವಿರೋಧಿ ಮಸೂದೆಗಳನ್ನು ವಾಪಸ್ ತೆಗೆದುಕೊಳ್ಳುವವರೆಗೆ ಮೋದಿ ಸರ್ಕಾರದೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ.
"ಮಸೂದೆಗಳನ್ನು ಹಿಂಪಡೆಯುವವರೆಗೆ ಕೇಂದ್ರದೊಂದಿಗೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ. ಶಿರೋಮಣಿ ಅಕಾಲಿ ದಳ ರೈತರ ಪಕ್ಷವಾಗಿದ್ದು, ಇದು ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿರಲಿದೆ" ಎಂದು ಬಾದಲ್ ತಿಳಿಸಿದ್ದಾರೆ.
ರೈತ ಮಸೂದೆಗಳನ್ನು ವಿರೋಧಿಸಿ ಬತಿಂಡಾ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಅವರು ಗುರುವಾರ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕೃಷಿಗೆ ಸಂಬಂಧಿಸಿದ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ-2020, ರೈತರು (ಸಬಲೀಕರಣ ಮತ್ತು ಸಂರಕ್ಷಣೆ) - ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ-2020, ಮತ್ತು ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆಯನ್ನು ಲೋಕಸಭೆಯಲ್ಲಿ ವ್ಯಾಪಕ ವಿರೋಧದ ನಡುವೆಯೂ ಗುರುವಾರ ಅಂಗೀಕರಿಸಲಾಗಿದೆ. ಈ ಮಸೂದೆಗಳನ್ನು ರಾಜ್ಯಸಭೆಯಲ್ಲಿ ಮಂಡಿಸಲು ಕೇಂದ್ರ ಸಿದ್ಧತೆ ನಡೆಸಿದೆ.