ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಗೆ ಮಾತೃ ವಿಯೋಗ

ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ತಾಯಿ ಸುಲೋಚನಾ ಸುಬ್ರಹ್ಮಣ್ಯಂ ಶನಿವಾರ ನಿಧನರಾಗಿದ್ದಾರೆ.
ತಾಯಿಯೊಂದಿಗೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್
ತಾಯಿಯೊಂದಿಗೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್

ನವದೆಹಲಿ:  ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ತಾಯಿ ಸುಲೋಚನಾ ಸುಬ್ರಹ್ಮಣ್ಯಂ ಶನಿವಾರ ನಿಧನರಾಗಿದ್ದಾರೆ. ಟ್ವಿಟರ್ ನಲ್ಲಿ ತಮ್ಮ ತಾಯಿಯ ಫೋಟೋವನ್ನು ಹಂಚಿಕೊಳ್ಳುವ ಮೂಲಕ  ಎಸ್ . ಜೈಶಂಕರ್ ಈ ಮಾಹಿತಿ ನೀಡಿದ್ದಾರೆ.

ಅನಾರೋಗ್ಯದ ಸಂದರ್ಭದಲ್ಲಿ ತಮ್ಮ ತಾಯಿಗೆ  ಬೆಂಬಲ ನೀಡಿದ ಎಲ್ಲರಿಗೂ ತಮ್ಮ ಕುಟುಂಬ ವಿಶೇಷವಾಗಿ ಧನ್ಯವಾದ ಸಲ್ಲಿಸುವುದಾಗಿ ಜೈ ಶಂಕರ್ ತಿಳಿಸಿದ್ದಾರೆ.

ಸುಲೋಚನಾ ಸುಬ್ರಹ್ಮಣ್ಯಂ  ಮೂವರು ಮಕ್ಕಳನ್ನು ಅಗಲಿದ್ದು, ಕೇಂದ್ರ ಸಚಿವ ಕಿರಣ್ ರಿಜಿಜು, ಬಿಜೆಪಿ ಮುಖಂಡ ರಾಮ್ ಮಾಧವ್, ನೀತಿ ಆಯೋಗ ಸಿಇಒ ಅಮಿತಾಬ್ ಕಾಂತ್ ಮತ್ತಿತರರು ಸುಬ್ರಹ್ಣ್ಯಂ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com