ದೇಶದಲ್ಲಿಯೇ ಅತ್ಯುತ್ತಮ ಫಿಲಂ ಸಿಟಿ ಉತ್ತರ ಪ್ರದೇಶದಲ್ಲಿ ನಿರ್ಮಾಣ: ಯೋಗಿ ಆದಿತ್ಯ ನಾಥ್
ಸಿಎಂ ಯೋಗಿ ಆದಿತ್ಯನಾಥ್, ದೇಶಕ್ಕೆ ಒಂದು ಉತ್ತಮವಾದ ಫಿಲಂ ಸಿಟಿ ಅವಶ್ಯಕತೆಯಿದ್ದು, ಅದನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
Published: 19th September 2020 02:06 PM | Last Updated: 19th September 2020 02:34 PM | A+A A-

ಯೋಗಿ ಆದಿತ್ಯನಾಥ್
ಲಕ್ನೋ: ಉತ್ತರ ಪ್ರದೇಶದ ನೋಯ್ಡಾದಲ್ಲಿ ಫಿಲಂ ಸಿಟಿ ನಿರ್ಮಿಸಲು ಸರ್ಕಾರ ಬದ್ಧವಾಗಿರುವುದಾಗಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ದೇಶಕ್ಕೆ ಒಂದು ಉತ್ತಮವಾದ ಫಿಲಂ ಸಿಟಿ ಅವಶ್ಯಕತೆಯಿದ್ದು, ಅದನ್ನು ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗುವುದು ಎಂದು ಹೇಳಿದ್ದಾರೆ.
ಅತ್ಯದ್ಭುತವಾದ ಫಿಲಂ ಸಿಟಿ ಸ್ಥಾಪನೆಗೆ ಸರ್ಕಾರ ಬದ್ಧವಾಗಿದ್ದು, ಗ್ರೇಟರ್ ನೋಯ್ಡಾ ಅಥವಾ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.
ನಿರ್ಮಾಪಕರಿಗೆ ಫಿಲಂ ಸಿಟಿ ಉತ್ತಮ ಅವಕಾಶ ಕಲ್ಪಿಸಲಿದ್ದು, ಹಲವು ಮಂದಿಗೆ ಉದ್ಯೋವಕಾಶ ಸಿಗಲಿದೆ, ಇದಕ್ಕಾಗಿ ಶೀಘ್ರವೇ ನೀಲನಕ್ಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ.