ಗುತ್ತಿಗೆ ಕೃಷಿ ಕಾರ್ಪೊರೇಟ್‌ಗಳಿಗೆ ಅನುಕೂಲಕರ: ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳಿಗೆ ಪ್ರತಿಪಕ್ಷಗಳ ಭಾರೀ ವಿರೋಧ

ಸಂಸತ್ತಿನ ಮಾನ್ಸೂನ್ ಅಧಿವೇಶನದ ಏಳನೇ ದಿನದಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಎರಡು ಕೃಷಿ ಮಸೂದೆಗಳನ್ನು ಮಂಡಿಸಿದ್ದಾರೆ. ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರು ((ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020. ಮಸೂದೆಯನ್ನು ಕೇಂದ್ರ ಸಚಿವರು ಮಂಡಿಸಿದ್ದಾರೆ. ಭಾನುವಾ
ಗುತ್ತಿಗೆ ಕೃಷಿ ಕಾರ್ಪೊರೇಟ್‌ಗಳಿಗೆ ಅನುಕೂಲಕರ: ರಾಜ್ಯಸಭೆಯಲ್ಲಿ ಕೃಷಿ ಮಸೂದೆಗಳಿಗೆ ಪ್ರತಿಪಕ್ಷಗಳ ಭಾರೀ ವಿರೋಧ

ನವದೆಹಲಿ: ಸಂಸತ್ತಿನ ಮಾನ್ಸೂನ್ ಅಧಿವೇಶನದ ಏಳನೇ ದಿನದಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಎರಡು ಕೃಷಿ ಮಸೂದೆಗಳನ್ನು ಮಂಡಿಸಿದ್ದಾರೆ. ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರು ((ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020. ಮಸೂದೆಯನ್ನು ಕೇಂದ್ರ ಸಚಿವರು ಮಂಡಿಸಿದ್ದಾರೆ. ಭಾನುವಾರ, ರಾಜ್ಯಸಭೆಯು ವಿವಾದಾತ್ಮಕ ಮಸೂದೆಗಳ ಬಗ್ಗೆ ಬಿಸಿ ಬಿಸಿ ಚರ್ಚಯಿಂದುಗೆ ಪ್ರಾರಂಬವಾಗಿದೆ.

ಈ ಮಸೂದೆಗಳಿಂದ ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗಲಿದ್ದು, ರೈತರು ಇದನ್ನು ಎಂದಿಗೂ ಒಪ್ಪುವುದಿಲ್ಲ ಎಂದು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ ಹೇಳಿದ್ದಾರೆ. ಅಮೆರಿಕಾದಲ್ಲಿಇಂತಹಾ ಗುತ್ತಿಗೆ ಕೃಷಿ ಭೂಮಿ ಕಾರ್ಪೊರೇಟ್ ಸ್ವಾಧೀನಕ್ಕೆ ಕಾರಣವಾಯಿತು ಎಂದು ಸಂಸದರು ಹೇಳಿದ್ದಾರೆ. 

ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ ಮಾತನಾಡಿ, ಮಂಡಿ  ಕಾರ್ಪೊರೇಟ್ ಸಂಸ್ಥೆಗಳ ವಿರುದ್ಧ ಹೇಗೆ ಸಾಧ್ಯ? ಹಾಗೆಯೇ ಇದು ಬಿಎಸ್ಎನ್ಎಲ್  ಜಿಯೋ ಮುಂದೆ ಸ್ಪರ್ಧಿಸುತ್ತಿದ್ದಂತಿದೆ ಎಂದರು.

ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸುತ್ತಿದೆ ಎಂದು ಪಿಎಂ ಹೇಳಿದ್ದು. 2022 ರ ವೇಳೆಗೆ ರೈತ ಆದಾಯವನ್ನುದ್ವಿಗುಣಗೊಳಿಸುವ ಗುರುಯನ್ನು ಕೇಂದ್ರ ಹೊಂದಿದೆ ಎಂದು ನೀವು ಹೇಳಿದ್ದಿರಿ. . ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರ ಆದಾಯವನ್ನು 2028 ಕ್ಕಿಂತ ಮೊದಲು ದ್ವಿಗುಣಗೊಳಿಸಲು ಸಾಧ್ಯವಿಲ್ಲ

ನೀವು ನೀಡುವ ಭರವಸೆಗಳ ವಿಶ್ವಾಸಾರ್ಹತೆ ಕಡಿಮೆಯಾಗಿದೆ ಎಂದು ಟಿಎಂಸಿ ಸಂಸದ ಡೆರೆಕ್ ಓ’'ಬ್ರಿಯೆನ್ ಹೇಳಿದ್ದಾರೆ. ಮತ್ತೊಂದೆಡೆ, ಬಿಎಸ್ಪಿ ಮುಖಂಡ ಭೂಪೇಂದರ್ ಯಾದವ್ ಅವರು ಎಂಎಸ್ಪಿಗೆ ಬೆಳೆಗಳನ್ನು ಖರೀದಿಸುವುದನ್ನು ಮುಂದುವರಿಸುತ್ತಾರೆ ಮತ್ತು ಇದು ರೈತರಿಗೆ ಮಾತ್ರ ಆಯ್ಕೆಯನ್ನು ಒದಗಿಸುತ್ತಿದೆ ಎಂದು ಹೇಳಿದರು.

ಎಐಎಡಿಎಂಕೆ ಸಂಸದ ಎಸ್.ಆರ್.ಬಾಲಸುಬ್ರಮಣಿಯಂಮಾತನಾಡಿ, ಕೃಷಿ ಮಸೂದೆಗಳು ಭಾರತೀಯ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತಹುದು, ಕೃಷಿ ಕ್ಷೇತ್ರದಲ್ಲಿ ದೊಡ್ಡ ಸಂಸ್ಥೆಗಳ ಪ್ರವೇಶಕ್ಕೆ ದಾರಿಯಾಗುತ್ತದೆ. ಆದರೆ ರಾಜ್ಯ ಸರ್ಕಾರಗಳು ಮೂಕ ಪ್ರೇಕ್ಷಕರಾಗಿತ್ತಿದ್ದಾರೆ.


ಬಿಜೆಪಿಯ ಮಿತ್ರಪಕ್ಷ ಎಐಎಡಿಎಂಕೆ ಸಂಸದರು ರೈತರ ವೆಚ್ಚದಲ್ಲಿ ಗುತ್ತಿಗೆ ಕೃಷಿ ನಡೆಸುವವರು ಚಂಪಾರಣ್  ಸತ್ಯಾಗ್ರಹವನ್ನು ಸ್ಮರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು ಕೆ ಕೆ ರಾಗೇಶ್ (ಸಿಪಿಐ), ಡೆರೆಕ್ ಒ'ಬ್ರಿಯೆನ್ (ಟಿಎಂಸಿ), ತಿರುಚಿ ಶಿವ (ಡಿಎಂಕೆ) ಮತ್ತು ಕೆ ಸಿ ವೇಣುಗೋಪಾಲ್ (ಕಾಂಗ್ರೆಸ್) ಈ ಎರಡು ಮಸೂದೆಗಳನ್ನು ಅಂಗೀಕಾರದ ಮುನ್ನ ಸದನದ ಆಯ್ದ ಸಮಿತಿಗೆ ಕಳುಹಿಸುವ ನಿರ್ಣಯ ಮಂಡಿಸಿದ್ದರು. 

ಇದಕ್ಕೂ ಮೊದಲು, ಮಸೂದೆಗಳನ್ನು ಕೆಳಮನೆ ಒಂದೆರಡು ದಿನಗಳ ಹಿಂದೆ ಧ್ವನಿ ಮತದಿಂದ ಅಂಗೀಕರಿಸಿತು. ಶಾಸನಗಳು ಈ ಖ್ರುಷಿ ವಲಯವನ್ನು ಪರಿವರ್ತಿಸುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸುತ್ತದೆ ಎಂದು ಸರ್ಕಾರ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com