ಕೃಷಿ ಮಸೂದೆಗಳು ರೈತರ ವಿರುದ್ಧದ 'ಡೆತ್ ಆರ್ಡರ್', ಪ್ರಜಾಪ್ರಭುತ್ವವನ್ನು ನಾಚಿಸುವಂತಿದೆ: ರಾಹುಲ್ ಗಾಂಧಿ

ಕೃಷಿ ಮಸೂದೆಗಳಿಗೆ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ನಂತರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ಇವುಗಳು ರೈತರ ವಿರುದ್ಧದ ಡೆತ್ ವಾರೆಂಟ್ ಆಗಿದೆ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೃಷಿ ಮಸೂದೆಗಳಿಗೆ ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದ ನಂತರ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದು, ಇವುಗಳು ರೈತರ ವಿರುದ್ಧದ ಡೆತ್ ವಾರೆಂಟ್ ಆಗಿದೆ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ರೈತರ ಉತ್ಪನ್ನ ಮಾರಾಟ ಮತ್ತು ವ್ಯವಹಾರ ( ಪ್ರಚಾರ ಮತ್ತು ಸೌಲಭ್ಯ) 
ರೈತರು (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಮಸೂದೆಯನ್ನು ರಾಜ್ಯಸಭೆಯಲ್ಲಿ ಇಂದು ಅಂಗೀಕರಿಸಲಾಗಿದೆ. ಗುರುವಾರ ಈ ಮಸೂದೆಗಳು ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದವು.

ರಾಜ್ಯಸಭೆಯಲ್ಲಿ ರೈತರ ವಿರುದ್ಧ ಮರಣದಂಡನೆ ಆದೇಶಗಳನ್ನು ತೆಗೆದುಕೊಂಡಿದ್ದರಿಂದ ಪ್ರಜಾಪ್ರಭುತ್ವವು ನಾಚಿಸುವಂತಿದೆ  ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಭೂಮಿಯಿಂದ ಚಿನ್ನವನ್ನು ಬೆಳೆಯುವ ರೈತನನ್ನು ಮೋದಿ ಸರ್ಕಾರ ಅಳುವಂತೆ ಮಾಡಿದೆ.  ಕೃಷಿ ಮಸೂದೆಯ ಹೆಸರಿನಲ್ಲಿ ರಾಜ್ಯಸಭೆಯಲ್ಲಿ ಇಂದು ರೈತರ ವಿರುದ್ಧದ ಮರಣ ದಂಡನೆ ಆದೇಶ ನೀಡಲಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ  ಪ್ರಧಾನಿ ನರೇಂದ್ರ ಮೋದಿ ಕೃಷಿ ಸಂಬಂಧಿತ ಮಸೂದೆಗಳನ್ನು ಜಾರಿಗೆ ತರಲು ಅವಕಾಶ ನೀಡುವ  ಮೂಲಕ ರೈತರು ಬಂಡವಾಳ ಶಾಹಿಗಳ ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com