ಐಎಎಫ್ ನ ರಾಫೆಲ್ ಗೆ ಶೀಘ್ರವೇ ಮಹಿಳಾ ಪೈಲಟ್ ನೇಮಕ

ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ಸೇರ್ಪಡೆಯಾಗಿರುವ ರಾಫೆಲ್ ಯುದ್ಧವಿಮಾನವನ್ನು ಮುನ್ನಡೆಸಲು ಮಹಿಳಾ ಪೈಲಟ್ ನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 
ರಫೇಲ್ ಯುದ್ಧ ವಿಮಾನಗಳು
ರಫೇಲ್ ಯುದ್ಧ ವಿಮಾನಗಳು

ನವದೆಹಲಿ: ಇತ್ತೀಚೆಗಷ್ಟೇ ಭಾರತೀಯ ವಾಯುಪಡೆ ಸೇರ್ಪಡೆಯಾಗಿರುವ ರಾಫೆಲ್ ಯುದ್ಧವಿಮಾನವನ್ನು ಮುನ್ನಡೆಸಲು ಮಹಿಳಾ ಪೈಲಟ್ ನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ರಾಫೆಲ್ ನ್ನು ಮುನ್ನಡೆಸಲು ಆ ಮಹಿಳಾ ಪೈಲಟ್ ಗೆ ಈಗಾಗಲೇ ತರಬೇತಿ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನೂ ಐಎಎಫ್ ನ ಹಿರಿಯ ಅಧಿಕಾರಿ ಬಹಿರಂಗಪಡಿಸಿದ್ದಾರೆ. 

ಆ ಮಹಿಳಾ ಪೈಲಟ್ ಈಗ ಮಿಗ್-21 ಫೈಟರ್ ಗಳನ್ನು ಮುನ್ನಡೆಸುತ್ತಿದ್ದು ಆಂತರಿಕ ಪ್ರಕ್ರಿಯೆಯಲ್ಲಿ ಅವರು ರಾಫೆಲ್ ಯುದ್ಧವಿಮಾನವನ್ನು ಚಾಲನೆ ಮಾಡುವುದಕ್ಕೆ ಆಯ್ಕೆಯಾಗಿದ್ದಾರೆ. 

ಪ್ರಸ್ತುತ ಐಎಎಫ್ ನಲ್ಲಿ 10 ಮಹಿಳಾ ಫೈಟರ್ ಜೆಟ್ ಫೈಲಟ್ ಗಳು ಹಾಗೂ 18 ಮಹಿಳಾ ನ್ಯಾವಿಗೇಟರ್ ಗಳಿದ್ದಾರೆ. ಐಎಎಫ್ ನಲ್ಲಿ ಒಟ್ಟು 1,875 ಮಹಿಳಾ ಅಧಿಕಾರಿಗಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com