ಉಪ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯ ನಿಯಮಗಳಿಗೆ ವಿರುದ್ಧ, ಅಶಿಸ್ತಿನ ವರ್ತನೆ ಖಂಡನೀಯ: ವೆಂಕೆಯ್ಯ ನಾಯ್ಡು

ಕೃಷಿ ಮಸೂದೆ ವಿಚಾರವಾಗಿ ವಿಪಶ್ರಗಳು ಸಲ್ಲಿಸಿದ್ದ ಉಪ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರಾಜ್ಯಸಭಾ ಸ್ಪೀಕರ್ ವೆಂಕೆಯ್ಯ ನಾಯ್ಡು ಅವರು ತಿರಸ್ಕರಿಸಿದ್ದು, ಸದಸ್ಯರ ಅಶಿಸ್ತಿನ ವರ್ತನೆ ದುರದೃಷ್ಟಕರ, ಖಂಡನೀಯ ಎಂದು ಹೇಳಿದ್ದಾರೆ.
ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು
ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು

ನವದೆಹಲಿ: ಕೃಷಿ ಮಸೂದೆ ವಿಚಾರವಾಗಿ ವಿಪಶ್ರಗಳು ಸಲ್ಲಿಸಿದ್ದ ಉಪ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರಾಜ್ಯಸಭಾ ಸ್ಪೀಕರ್ ವೆಂಕೆಯ್ಯ ನಾಯ್ಡು ಅವರು ತಿರಸ್ಕರಿಸಿದ್ದು, ಸದಸ್ಯರ ಅಶಿಸ್ತಿನ ವರ್ತನೆ ದುರದೃಷ್ಟಕರ, ಖಂಡನೀಯ ಎಂದು ಹೇಳಿದ್ದಾರೆ.

ಇಂದು ರಾಜ್ಯಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಮತ್ತೆ ವಿಪಕ್ಷ ನಾಯಕರು ಗಲಾಟೆಗೆ ಮುಂದಾದರು. ಸ್ಪೀಕರ್ ವೆಂಕಯ್ಯ ನಾಯ್ಡು ಅವರು ಹಲವು ಬಾರಿ ಎಚ್ಚರಿಕೆ ನೀಡಿದರೂ ಸದಸ್ಯರು ಸುಮ್ಮನಾಗದ ಹಿನ್ನಲೆಯಲ್ಲಿ ಟಿಎಂಸಿ ಸದಸ್ಯ ಡರೇಕ್ ಒಬ್ರಿಯಾನ್ ಅವರನ್ನು ಸದನದಿಂದ ಹೊರ ಹೋಗುವಂತೆ  ಸೂಚಿಸಿದರು. ಆದರೂ ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ವೆಂಕಯ್ಯ ನಾಯ್ಡು ಅವರು ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು  ವಾರ ಅಮಾನತುಗೊಳಿಸಿದರು. ಅಲ್ಲದೆ ಸದನವನ್ನು 10 ಗಂಟೆಗೆ ಮುಂದೂಡಿದರು.

ಉಪ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯ ತಿರಸ್ಕಾರ
ಇದೇ ವೇಳೆ ಉಪ ಸಭಾಪತಿಗಳ ವಿರುದ್ಧ ವಿಪಕ್ಷ ಸದಸ್ಯರು ಸಲ್ಲಿಕೆ ಮಾಡಿದ್ದ ಅವಿಶ್ವಾಸ ನಿರ್ಣಯವನ್ನು ತಿರಸ್ಕಾರಿಸಿದ ವೆಂಕಯ್ಯ ನಾಯ್ಡು ಅವರು, ಸದಸ್ಯರ ನಿರ್ಣಯವನ್ನು ನಿಯಮಗಳ ಅಡಿಯಲ್ಲಿ ಒಪ್ಪಲಾಗುವುದಿಲ್ಲ. ನಿರ್ಣಯ ಸರಿಯಾದ ಸ್ವರೂಪದಲ್ಲಿರಲಿಲ್ಲ. ಹೀಗಾಗಿ ನಿರ್ಣಯವನ್ನು ತಿರಸ್ಕರಿಸಲಾಗಿದೆ ಎಂದು  ಹೇಳಿದರು. ಅಂತೆಯೇ ಸದನದಲ್ಲಿನ ಕೋಲಾಹಲದ ಕುರಿತು ಮಾತನಾಡಿದ ವೆಂಕಯ್ಯ ನಾಯ್ಡು ಅವರು, ನಿನ್ನೆ ಸದನದ ಕೆಟ್ಟ ದಿನವಾಗಿತ್ತು. ಕೆಲ ಸದಸ್ಯರು ಸದನದ ಬಾವಿಗೆ ಬಂದು ಅಶಿಸ್ತಿನ ವರ್ತನೆ ತೋರಿದ್ದಾರೆ. ಅಲ್ಲದೆ ಉಪ ಸಭಾಪತಿಗಳಿಗೆ ದೈಹಿಕ ಬೆದರಿಕೆ ಹಾಕಿದ್ದಾರೆ. ಅವರಿಗೆ ಅವರ ಕರ್ತವ್ಯ ನಿರ್ವಹಣೆ  ಮಾಡಲು ಅಡ್ಡಿ ಪಡಿಸಿದ್ದಾರೆ. ನಿಜಕ್ಕೂ ಇದು ದುರದೃಷ್ಟಕರ ಮತ್ತು ಖಂಡನೀಯ. ದಯವಿಟ್ಟು ಸ್ವಲ್ಪ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ನಾನು ಸಂಸದರಿಗೆ ಸೂಚಿಸುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com