ಕೃಷಿ ಮಸೂದೆ: ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದ ಕೇಜ್ರಿವಾಲ್

ಕೃಷಿ ಮಸೂದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಮಸೂದೆಯನ್ನು ಖಂಡಿಸಿದ್ದಾರೆ. 
ಕೃಷಿ ಮಸೂದೆ: ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದ ಕೇಜ್ರಿವಾಲ್
ಕೃಷಿ ಮಸೂದೆ: ಕೇಂದ್ರ ಸರ್ಕಾರವನ್ನು ಟಾರ್ಗೆಟ್ ಮಾಡಿದ ಕೇಜ್ರಿವಾಲ್

ನವದೆಹಲಿ: ಕೃಷಿ ಮಸೂದೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಹ ಮಸೂದೆಯನ್ನು ಖಂಡಿಸಿದ್ದಾರೆ. ಕೃಷಿ ಮಸೂದೆಯನ್ನು ಅಪಾಯಕಾರಿ ಎಂದು ಹೇಳಿರುವ ಕೇಜ್ರಿವಾಲ್, ರಾಜ್ಯಸಭೆಯಲ್ಲಿ ಮತಗಳನ್ನು ವಿಭಾಗಿಸದೇ ಮಸೂದೆ ಅಂಗೀಕಾರ ಮಾಡಿರುವುದನ್ನು ಖಂಡಿಸಿದ್ದಾರೆ. 

ಇದೇ ವೇಳೆ ದುರ್ವರ್ತನೆ ತೋರಿ ಅಮಾನತುಗೊಂಡು, ಪ್ರತಿಭಟನೆ ನಡೆಸುತ್ತಿರುವ ಸಂಸದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇಜ್ರಿವಾಲ್, ಪ್ರತಿಭಟನಾ ನಿರತ 8 ಸಂಸದರು ಬಿಸಿಲು, ಸೊಳ್ಳೆಗಳ ಕಾಟವನ್ನು ಲೆಕ್ಕಿಸದೇ ರೈತರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಅವರು ತಮಗಾಗಿ ಏನನ್ನೂ ಕೇಳುತ್ತಿಲ್ಲ. ದೇಶದ ರೈತರಿಗಾಗಿ ಹೋರಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. 

ದೇಶಾದ್ಯಂತ ಇರುವ ರೈತರು ಈ ಮಸೂದೆ ತಮ್ಮನ್ನು ಅಂತ್ಯಗೊಳಿಸಲಿದೆ ಎಂದು ಹೇಳುತ್ತಿದ್ದಾರೆ. ಇಂತಹ ಅಪಾಯಕಾರಿ ಮಸೂದೆಯನ್ನು ಮತಕ್ಕೆ ಹಾಕದೇ ಅಂಗೀಕರಿಸಲಾಗಿದೆ. ಹಾಗಾದಲ್ಲಿ ಸಂಸತ್, ಚುನಾವಣೆಗಳಿಗೆ ಅರ್ಥವೇನು ಉಳಿಯಲಿದೆ? ಚುನಾವಣೆಗೆ ಏನು ಅರ್ಥ? ಸಂಸತ್ ಅಧಿವೇಶನವನ್ನು ಏಕೆ ಕರೆದಿರಿ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. 

ಮನೀಷ್ ಸಿಸೋಡಿಯಾ ಕೇಂದ್ರ ಸರ್ಕಾರವನ್ನು ಬ್ರಿಟೀಷ್ ಸರ್ಕಾರಕ್ಕೆ ಹೋಲಿಕೆ ಮಾಡಿದ್ದಾರೆ. ರೈತರು, ಕಾರ್ಮಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದರು, ನಂತರ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧಿ ಹಾಗೂ ಇನ್ನಿತರ ನಾಯಕರಿಗೆ ಟೀ ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ಮಾಡುತ್ತಿದೆ ಎಂದು ಸಿಸೊಡಿಯಾ ಹೇಳಿದ್ದಾರೆ. 

ರಾಜ್ಯಸಭೆ ಉಪಾಧ್ಯಕ್ಷ ಹರಿವಂಶ್ ಪ್ರತಿಭಟನಾ ನಿರತ ಸಂಸದರಿಗೆ ಟೀ ನೀಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದ ಸಂಜಯ್ ಸಿಂಗ್, ನಿಮ್ಮ ಟೀಯನ್ನು ವಿನಮ್ರವಾಗಿ ವಾಪಸ್ ನೀಡುತ್ತೇನೆ, ನೀವು ರೈತರ ಫಸಲನ್ನು ವಾಪಸ್ ನೀಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com