ಬಾಲಿವುಡ್ ಡ್ರಗ್ಸ್ ನಂಟು: ದೀಪಿಕಾ ಪಡುಕೋಣೆ ಮ್ಯಾನೇಜರ್ ಗೆ ಎನ್‌ಸಿಬಿ ಬುಲಾವ್

ಬಾಲಿವುಡ್-ಡ್ರಗ್ ನಂಟಿನ ಆರೋಪದ ತನಿಖೆಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿ ದೀಪಿಕಾ ಪಡುಕೋಣೆ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಮತ್ತು ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜನ್ಸಿ ಸಿಇಒ ಧೂರ್ವ್ ಚಿಟ್ಗೋಪೇಕರ್ ಅವರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕಳಿಸಿದೆ.

Published: 22nd September 2020 12:44 PM  |   Last Updated: 22nd September 2020 01:16 PM   |  A+A-


ದೀಪಿಕಾ ಪಡುಕೋಣೆ

Posted By : Raghavendra Adiga
Source : PTI

ಮುಂಬೈ: ಬಾಲಿವುಡ್-ಡ್ರಗ್ ನಂಟಿನ ಆರೋಪದ ತನಿಖೆಗೆ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನಟಿ ದೀಪಿಕಾ ಪಡುಕೋಣೆ ವ್ಯವಸ್ಥಾಪಕಿ(ಮ್ಯಾನೇಜರ್)ಕರಿಷ್ಮಾ ಪ್ರಕಾಶ್ ಮತ್ತು ಪ್ರತಿಭಾ ನಿರ್ವಹಣಾ ಸಂಸ್ಥೆಯ (ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜನ್ಸಿ) ಸಿಇಒ  ಧೂರ್ವ್ ಚಿಟ್ಗೋಪೇಕರ್ ಅವರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕಳಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಇವರಿಬ್ಬರನ್ನೂ ಮಂಗಳವಾರ ಮಧ್ಯಾಹ್ನ ಎನ್‌ಸಿಬಿ ವಿಚಾರಣೆ ನಡೆಸಲಿದೆ.

ಚಿಟ್ಗೋಪೇಕರ್ ಕೆಡಬ್ಲ್ಯುಎಎನ್ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಏಜನ್ಸಿಯ ಸಿಇಒ ಆಗಿದ್ದು, ಕರಿಷ್ಮಾ ಪ್ರಕಾಶ್ ಅವರು ಏಜೆನ್ಸಿಯಲ್ಲಿ ಉದ್ಯೋಗಿಯಾಗಿದ್ದಾರೆ.  ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಎನ್‌ಸಿಬಿ ಡ್ರಗ್ಸ್ ಹಿನ್ನೆಲೆಯ ತನಿಖೆ ಸಮಯದಲ್ಲಿ ಬಾಲಿವುಡ್‌ನಲ್ಲಿ ವ್ಯಾಪಕವಾದ ಡ್ರಗ್ಸ್ ನಂಟು ಇರುವುದು ಪತ್ತೆಯಾಗಿತ್ತು.

ರಜಪೂತ್ ಅವರ ಟ್ಯಾಲೆಂಟ್ ಮ್ಯಾನೇಜರ್ ಜಯ ಸಹಾ ಅವರನ್ನು ಎನ್‌ಸಿಬಿ ಸೋಮವಾರ ವಿಚಾರಣೆ ನಡೆಸಿದೆ. ಆಗ ಅವರು ಬಾಲಿವುಡ್ ನಲ್ಲಿ ಡ್ರಗ್ಸ್ ನಂಟಿನ ಆಳವಾದ ಬೇರಿದೆ ಎಂದು  ಹೇಳಲಾದ ಅನೇಕ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ಎನ್‌ಸಿಬಿ ವಿಚಾರಣೆ ನಡೆಸಿದ್ದ ವ್ಯಕ್ತಿಗಳ ಕೆಲವು ವಾಟ್ಸಾಪ್ ಚಾಟ್‌ಗಳು ಡ್ರಗ್ಸ್ ಬಗ್ಗೆ ಚರ್ಚಿಸಿರುವುದು ಕಂಡುಬಂದಿದೆ ಎಂದು ಅವರು ಹೇಳಿದರು. ನಟನ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ನಂಟಿನ ಬಗ್ಗೆ ತನಿಖೆಗೆ ಸಂಬಂಧಿಸಿದಂತೆ ಎನ್‌ಸಿಬಿ ಈವರೆಗೆ ರಜಪೂತ್ ಗೆಳತಿ ಮತ್ತು ನಟಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸಹೋದರ ಶೋಯಿಕ್ ಚಕ್ರವರ್ತಿ ಸೇರಿದಂತೆ 12 ಕ್ಕೂ ಹೆಚ್ಚು ಜನರನ್ನು ಬಂಧಿಸಿದೆ. ರ

ನಟ ಸುಶಾಂತ್ ಸಿಂಗ್ ರಜಪೂತ್ (34) ಜೂನ್ 14 ರಂದು ಬಾಂದ್ರಾದ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp