ಏಪ್ರಿಲ್-ಆಗಸ್ಟ್ ತಿಂಗಳಲ್ಲಿ ಚೀನಾದಿಂದ ಆಮದು ಶೇ.27 ರಷ್ಟು ಕುಸಿತ: ಕೇಂದ್ರ ಸರ್ಕಾರ

ಈ ಹಣಕಾಸು ವರ್ಷದ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಚೀನಾದಿಂದ ಆಮದು ಶೇ. 27 ರಷ್ಟು ಕುಸಿತವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈ ಹಣಕಾಸು ವರ್ಷದ ಏಪ್ರಿಲ್- ಆಗಸ್ಟ್ ಅವಧಿಯಲ್ಲಿ ಚೀನಾದಿಂದ ಆಮದು ಶೇ. 27 ರಷ್ಟು ಕುಸಿತವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸಂಸತ್ತಿನಲ್ಲಿ ಮಾಹಿತಿ ನೀಡಿದೆ.

ಜುಲೈನಲ್ಲಿ 5.58 ಬಿಲಿಯನ್ ಡಾಲರ್ , ಆಗಸ್ಟ್ ನಲ್ಲಿ 4.98 ಬಿಲಿಯನ್ ಡಾಲರ್ ನಷ್ಟು ಮೌಲ್ಯದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಚಾವ್ಲಾ ಲೋಕಸಭೆಗೆ ಲಿಖಿತ ಉತ್ತರ ಉತ್ತರದಲ್ಲಿ ತಿಳಿಸಿದ್ದಾರೆ.

ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ. 27.63 ರಷ್ಟು ಚೀನಾದಿಂದ ಆಮದು ಕಡಿಮೆಯಾಗಿರುವುದಾಗಿ ಅವರು ಹೇಳಿದ್ದಾರೆ.

ಚೀನಾಕ್ಕೆ ಹೆಚ್ಚು ಒಲವು ಹೊಂದಿರುವ ರಾಷ್ಟ್ರ (ಎಂಎಫ್‌ಎನ್) ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಕುರಿತು ಯಾವುದೇ ಪ್ರಸ್ತಾಪವಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಸಚಿವರು ಉತ್ತರಿಸಿದರು.ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ದೇಶದ ರಫ್ತು ಪ್ರಮಾಣ ಪುನರುಜ್ಜೀವನಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com