ಪ್ರಧಾನಿ ಮೋದಿ 58 ದೇಶಗಳ ಪ್ರವಾಸಕ್ಕೆ 517 ಕೋಟಿ ಖರ್ಚು: ವಿದೇಶಾಂಗ ವ್ಯವಹಾರಗಳ ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದು, ವಿದೇಶಿ ಪ್ರವಾಸಗಳಿಗೆ ಪ್ರಧಾನಿ ಮೋದಿಯವರ ಖರ್ಚು, ವೆಚ್ಚದ ಕುರಿತು ತಿಳಿಸಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕುತೂಹಲಕಾರಿ ಮಾಹಿತಿಯನ್ನು ನೀಡಿದ್ದು, ವಿದೇಶಿ ಪ್ರವಾಸಗಳಿಗೆ ಪ್ರಧಾನಿ ಮೋದಿಯವರ ಖರ್ಚು, ವೆಚ್ಚದ ಕುರಿತು ತಿಳಿಸಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಕೇಂದ್ರದ ರಾಜ್ಯ ವಿದೇಶಾಂಗ ವ್ಯವಹಾರಗಳ ಸಚಿವ ವಿ.ಮುರುಳೀಧರನ್ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. 2015ರಿಂದ ಪ್ರಧಾನಿ ನರೇಂದ್ರ ಮೋದಿಯವರು 58 ದೇಶಗಳಿಗೆ ಭೇಟಿ ನೀಡಿದ್ದು, ಒಟ್ಟು 517.82 ಕೋಟಿ ರೂ. ವೆಚ್ಚವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಮುಖವಾಗಿ ಅಮೆರಿಕ ಹಾಗೂ ರಷ್ಯಾ ದೇಶಗಳಿಗೆ ಪ್ರಧಾನಿ ಮೋದಿ ಹೆಚ್ಚಿಗೆ ಭೇಟಿ ನೀಡಿದ್ದು, ಎರಡು ರಾಷ್ಟ್ರಗಳಿಗೆ ತಲಾ 5 ಬಾರಿ ಭೇಟಿ ನೀಡಿದ್ದಾರೆ ಎಂದು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಹೇಳಿದ್ದಾರೆ. ಸದಾ ಗಡಿ ಕ್ಯಾತೆ ತೆಗೆಯುತ್ತಿರುವ ಚೀನಾಗೂ ಮೋದಿ ಭೇಟಿ ನೀಡಿದ್ದಾರೆ ಎಂದು ಕೇಂದ್ರ ಹೇಳಿದೆ.

ಸಿಂಗಾಪುರ, ಜರ್ಮನಿ, ಫ್ರಾನ್ಸ್, ಯುಎಇ ಮತ್ತು ಶ್ರೀಲಂಕಾಗಳಿಗೂ ಸಹ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಈ ಪ್ರವಾಸಗಳಿಗೆ ಒಟ್ಟು 517.82 ಕೋಟಿ ರೂ. ಖರ್ಚಾಗಿದೆ. ಕೆಲವು ದೇಶಗಳ ಭೇಟಿ ಬಹು ರಾಷ್ಟ್ರ ಪ್ರವಾಸಗಳ ಭಾಗವಾಗಿದ್ದರೆ, ಅನೇಕ ದೇಶಗಳ ಭೇಟಿ ಸ್ವತಂತ್ರ ದ್ವಿಪಕ್ಷೀಯ ಪ್ರವಾಸಗಳಾಗಿದ್ದವು. 

ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಕಳೆದ ವರ್ಷ ನವೆಂಬರ್‌ನಲ್ಲಿ ಬ್ರೆಜಿಲ್‌ಗೆ ಭೇಟಿ ನೀಡಿರುವುದು ಪ್ರಧಾನ ಮಂತ್ರಿಗಳ ಕೊನೆಯ ವಿದೇಶ ಪ್ರವಾಸವಾಗಿದೆ. ಕಳೆದ ನವೆಂಬರ್‌ ಆರಂಭದಲ್ಲಿ ಥೈಲ್ಯಾಂಡ್‌ಗೆ ಮೋದಿ ಭೇಟಿ ನೀಡಿದ್ದರು.

ಪ್ರಧಾನಿಗಳ ವಿದೇಶ ಪ್ರವಾಸದ ಸಮಯದಲ್ಲಿ ಪರಸ್ಪರ ಚರ್ಚೆ, ಇತರ ದೇಶಗಳೊಂದಿಗಿನ ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಭಾರತದ ದೃಷ್ಟಿಕೋನವನ್ನು ಹೆಚ್ಚಿಸಿದೆ. ಈ ಮೂಲಕ ನಮ್ಮ ಜನರ ಆರ್ಥಿಕ ಬೆಳವಣಿಗೆ ಹಾಗೂ ಯೋಗಕ್ಷೇಮವನ್ನು ಉತ್ತೇಜಿಸಲು ಭಾರತದ ಅಭಿವೃದ್ಧಿ ಕಾರ್ಯಸೂಚಿಗೆ ಕೊಡುಗೆ ನೀಡಿವೆ ಎಂದು ಮಾಹಿತಿ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com