ನಾನು ಮಾಸ್ಕ್ ಧರಿಸುವುದಿಲ್ಲ ಎಂದಿದ್ದ ಮಧ್ಯಪ್ರದೇಶದ ಸಚಿವ ಕ್ಷಮೆಯಾಚನೆ!

ಸಾರ್ವಜನಿಕ ಸಮಾರಂಭಗಳಲ್ಲಿ ನಾನು ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ತಮ್ಮ ಹೇಳಿಕೆ ಕುರಿತು ಗುರುವಾರ ಕ್ಷಮೆಯಾಚಿಸಿದ್ದಾರೆ. 
ನರೋತ್ತಮ್ ಮಿಶ್ರಾ
ನರೋತ್ತಮ್ ಮಿಶ್ರಾ

ಇಂದೋರ್: ಸಾರ್ವಜನಿಕ ಸಮಾರಂಭಗಳಲ್ಲಿ ನಾನು ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿ ತೀವ್ರ ಟೀಕೆಗಳಿಗೆ ಗುರಿಯಾಗಿದ್ದ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು, ತಮ್ಮ ಹೇಳಿಕೆ ಕುರಿತು ಗುರುವಾರ ಕ್ಷಮೆಯಾಚಿಸಿದ್ದಾರೆ. 

ಮಾಸ್ಕ್ ಧರಿಸುವುದಿಲ್ಲ ಎಂಬ ನನ್ನ ಹೇಳಿಕೆಯಿಂದ ಕಾನೂನು ಉಲ್ಲಂಘನೆಯಾಗಿದೆ. ಪ್ರಧಾನಮಂತ್ರಿಗಳ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನನ್ನದಾಗಿರಲಿಲ್ಲ. ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತೇನೆ. ಹೇಳಿಕೆಗ ವಿಷಾದ ವ್ಯಕ್ತಪಡಿಸುತ್ತೇನೆ. ಇನ್ನು ಮುಂದೆ ಮಾಸ್ಕ್ ಧರಿಸುತ್ತೇನೆ. ಪ್ರತೀಯೊಬ್ಬರು ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ. 

ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ನರೋತ್ತಮ್ ಮಿಶ್ರಾ ಅವರು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಾನೆಂದಿಗೂ ಮಾಸ್ಕ್ ಗಳನ್ನು ಧರಿಸುವುದಿಲ್ಲ. ಇದರಲ್ಲಿ ತಪ್ಪೇನಿದೆ? ಎಂದು ಹೇಳಿದ್ದರು. ಯಾವ ಕಾರಣಕ್ಕೆ ಮಾಸ್ಕ್ ಧರಿಸುವುದಿಲ್ಲ ಎಂಬ ಪ್ರಶ್ನೆಗೆ, ಸುಮ್ಮನೆ ಮಾಸ್ಕ್ ಧರಿಸುವುದಿಲ್ಲ ಅಷ್ಟೇ ಎಂದಿದ್ದರು. 

ಮಿಶ್ರಾ ಅವರ ಈ ಹೇಳಿಕೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದ್ದ ಕಾಂಗ್ರೆಸ್, ಮಧ್ಯಪ್ರದೇಶ ರಾಜ್ಯದ ಗೃಹ ಸಚಿವರು ನಾನು ಮಾಸ್ಕ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ. ಮೋದಿ ಜೀ, ಸಾಂಕ್ರಾಮಿಕದ ಸಂದರ್ಭದ ಈ ಸಮಯದಲ್ಲಿ ಸಾರ್ವಜನಿಕರೂ ಕೂಡ ತಮ್ಮ ಇಚ್ಛೆಗೆ ತಕ್ಕಂತೆ ನಿಯಮಗಳನ್ನು ಮುರಿಯಬಹುದೇ? ಎಂದು ಪ್ರಶ್ನಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com