ಮಹಿಳೆಯರ ವಿರುದ್ಧದ ಅಪರಾಧ: ಯೋಗಿ ಸರ್ಕಾರದಿಂದ 'ಆಪರೇಷನ್ ದುರಾಚಾರಿ' ಪ್ರಾರಂಭ

ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅವರೆಡೆಗೆ ದೌರ್ಜನ್ಯ ನಡೆಸುವವರು ಚುಡಾಯಿಸುವವರ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆಪರೇಷನ್ ದುರಾಚಾರಿಯನ್ನು ಪ್ರಾರಂಭಿಸಿದೆ. 

Published: 24th September 2020 07:07 PM  |   Last Updated: 24th September 2020 08:04 PM   |  A+A-


Crime against women: Yogi govt to launch 'Operation Durachari' to name, shame offenders

ಮಹಿಳೆಯರ ವಿರುದ್ಧದ ಅಪರಾಧ: ಆಪರೇಷನ್ ದುರಾಚಾರಿಯನ್ನು ಪ್ರಾರಂಭಿಸಿದ ಯೋಗಿ ಸರ್ಕಾರ

Posted By : Srinivas Rao BV
Source : IANS

ಲಖನೌ: ಮಹಿಳೆಯರಿಗೆ ಲೈಂಗಿಕ ಕಿರುಕುಳ, ಅವರೆಡೆಗೆ ದೌರ್ಜನ್ಯ ನಡೆಸುವವರು ಚುಡಾಯಿಸುವವರ ವಿರುದ್ಧ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆಪರೇಷನ್ ದುರಾಚಾರಿಯನ್ನು ಪ್ರಾರಂಭಿಸಿದೆ. 

ಸಿಎಎಯನ್ನು ವಿರೋಧಿಸಿ ಪ್ರತಿಭಟಿಸಿ, ಸಾರ್ವಜನಿಕ ಆಸ್ತಿಗಳನ್ನು ಹಾನಿ ಮಾಡುವವರ ಹೆಸರನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸಿದಂತೆಯೇ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ, ಚುಡಾಯಿಸುವ ಪುಂಡರ ಹೆಸರನ್ನು ಫೋಟೋ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಪ್ರಕಟಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. 

ಈ ನಿಟ್ಟಿನಲ್ಲಿ ಈಗಾಗಲೇ ಸಿಎಂ ಯೋಗಿ ಆದಿತ್ಯನಾಥ್ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದಾರೆ. ಮಹಿಳಾ ಪೊಲೀಸರಿಗೂ ಸಹ ಆಪರೇಷನ್ ದುರಾಚಾರಿಯಡಿಯಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ನಿಯಂತ್ರಿಸುವುದಕ್ಕೆ ಯೋಗಿ ಸರ್ಕಾರ ಸೂಚಿಸಿದೆ. 

ಲಖನೌ ಐಜಿ ಲಕ್ಷ್ಮಿ ಸಿಂಗ್ ಆಪರೇಷನ್ ಶಕ್ತಿಯನ್ನು ಮುನ್ನಡೆಸುತ್ತಿದ್ದು ಮಹಿಳೆಯರ ವಿರುದ್ಧ ದೌರ್ಜನ್ಯ ಎಸಗಿದ 2200 ಕ್ರಿಮಿನಲ್ ಗಳನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp