ನನ್ನಮ್ಮ ಪ್ರತಿ ಬಾರಿ ಫೋನ್ ಮಾಡಿದಾಗ ಆ ವಿಷಯ ಕೇಳುತ್ತಾರೆ: ಪ್ರಧಾನಿ ಮೋದಿ

‘ಫಿಟ್ ನೆಸ್’ ಗೆ ಐಕಾನ್ ಗಳೆಂದು ಪರಿಗಣಿಸಲಾಗುವ ಕೆಲ ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದರು. 
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ‘ಫಿಟ್ ನೆಸ್’ ಗೆ ಐಕಾನ್ ಗಳೆಂದು ಪರಿಗಣಿಸಲಾಗುವ ಕೆಲ ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ವಿಡಿಯೋ ಕಾನ್ಫರೆನ್ಸ್ ನಡೆಸಿದರು. 

ಮಿಲಿಂದ್ ಸೋಮನ್, ವಿರಾಟ್ ಕೊಹ್ಲಿ ಸೇರಿದಂತೆ ಇನ್ನೂ ಹಲವು ಗಣ್ಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. 'ಫಿಟ್ ಇಂಡಿಯಾ' ಅಭಿಯಾನದ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಅವರು ಈ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಖ್ಯಾತ ಪೌಷ್ಟಿಕಾಂಶಗಳ ತಜ್ಞ ರಜುತಾ ದಿವಾಕರ್ ಅವರೊಂದಿಗೆ ಮಾತನಾಡುತ್ತಾ.. ಕುತೂಹಲಕಾರಿ ವಿಷಯವಾಗಿರುವ, ತಮ್ಮ ಆಹಾರದ ಡಯಟ್ ಕುರಿತ ರಹಸ್ಯವನ್ನು ಬಹಿರಂಗಪಡಿಸಿದರು. 
'ವಾರದಲ್ಲಿ ಎರಡು ದಿನ ನನ್ನತಾಯಿ ನನಗೆ ದೂರವಾಣಿ ಕರೆ ಮಾಡುತ್ತಾರೆ. ನನ್ನ ಯೋಗ ಕ್ಷೇಮ ಕೇಳುತ್ತಾರೆ. ಫೋನ್ ಕರೆಮಾಡಿದಾಗಲೆಲ್ಲಾ, “ಪ್ರತಿ ದಿನ ಹರಿಶಿನ ಬಳಸುತ್ತಿದ್ದೀಯಾ..? ಎಂದು ಕೇಳುತ್ತಾರೆ. ನಾನು ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಹರಿಶಿನ ಬಳಸುವ ಬಗ್ಗೆಯೂ ಬಹಳಷ್ಟು ಬಾರಿ ಮಾತನಾಡಿದ್ದೇನೆ ”ಎಂದು ಪ್ರಧಾನಿ ಮೋದಿ , ರಜುತಾ ದಿವಾಕರ್ ಅವರಿಗೆ ತಿಳಿಸಿದ್ದಾರೆ.

ಫಿಟ್‌ ಇಂಡಿಯಾ ಚಳವಳಿಯ ಮೊದಲ ವಾರ್ಷಿಕೋತ್ಸವದ ಸಮಾರಂಭಕ್ಕಾಗಿ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಫಿಟ್‌ನೆಸ್‌ ದಿಗ್ಗಜರು ಹಾಗೂ ನಾಗರಿಕರೊಡನೆ ಆನ್‌ಲೈನ್‌ ಸಂವಾದ ನಡೆಸಿದರು. ಯಾವುದೇ ವ್ಯಕ್ತಿ ತನ್ನ ದೇಹ ಸಧೃಡವಾಗಿ ಇಟ್ಟುಕೊಳ್ಳುವುದು ಮುಖ್ಯ. ಆರೋಗ್ಯವನ್ನು ಕಡಿಮೆ ಮಾಡಿಕೊಳ್ಳಬೇಡಿ, ಆದರೆ ತೂಕವನ್ನು ಕಡಿಮೆ ಮಾಡಿಕೊಳ್ಳಿ. ಪ್ರತಿನಿತ್ಯ ಕನಿಷ್ಠ ಅರ್ಧಗಂಟೆ ವ್ಯಾಯಾಮ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com