ಪುದುಚೇರಿ: ಫ್ರೆಂಚ್ ಮೂಲದ ವ್ಯಕ್ತಿಯ ಮನೆಯಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ 74 ಪ್ರಾಚೀನ ವಿಗ್ರಹ ವಶಕ್ಕೆ!

ಪೊಲೀಸ್ ವರಿಷ್ಠಾಧಿಕಾರಿ ಆರ್.ಶಕ್ತಿವೇಲ್ ನೇತೃತ್ವದ ತಮಿಳುನಾಡು ವಿಗ್ರಹ ವಿಭಾಗ ಸಿಐಡಿ ತಂಡ ದಾಳಿ ನಡೆಸಿ ಪುದುಚೇರಿಯಲ್ಲಿರುವ ಫ್ರೆಂಚ್ ಪ್ರಜೆಯೊಬ್ಬರ ಮನೆಯಿಂದ 74 ಪುರಾತನ ವಿಗ್ರಹಗಳನ್ನು ವಶಪಡಿಸಿಕೊಂಡಿದೆ.
ಪ್ರಾಚೀನ ವಿಗ್ರಹಗಳು
ಪ್ರಾಚೀನ ವಿಗ್ರಹಗಳು

ಪುದುಚೇರಿ: ಪೊಲೀಸ್ ವರಿಷ್ಠಾಧಿಕಾರಿ ಆರ್.ಶಕ್ತಿವೇಲ್ ನೇತೃತ್ವದ ತಮಿಳುನಾಡು ವಿಗ್ರಹ ವಿಭಾಗ ಸಿಐಡಿ ತಂಡ ದಾಳಿ ನಡೆಸಿ ಪುದುಚೇರಿಯಲ್ಲಿರುವ ಫ್ರೆಂಚ್ ಪ್ರಜೆಯೊಬ್ಬರ ಮನೆಯಿಂದ 74 ಪುರಾತನ ವಿಗ್ರಹಗಳನ್ನು ವಶಪಡಿಸಿಕೊಂಡಿದೆ.

ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ವಿಜಯಕುಮಾರ್ ಅವರಿಂದ ಸರ್ಚ್ ವಾರಂಟ್ ಪಡೆದ ನಂತರ ದಾಳಿ ನಡೆಸಿ ವಿಗ್ರಹಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಶಕ್ತಿವೆಲ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ರೊಮೈನ್ ರೋಲ್ಯಾಂಡ್ ಸ್ಟ್ರೀಟ್‌ನಲ್ಲಿ (ಕಲೆ ಮತ್ತು ಸಂಸ್ಕೃತಿ ಇಲಾಖೆಯ ಎದುರು) ಪೂರ್ವಜರ ಮನೆಯನ್ನು ಮಾಲೀಕ ಜೀನ್ ಪಾಲ್ ರಾಜಾರಥಿನಂ ಅವರ ಸಮ್ಮುಖದಲ್ಲಿ ಪೂರ್ವಜರ ಮನೆಯನ್ನು ಶೋಧಿಸಲಾಯಿತು. ಈ ವೇಳೆ ಕೋಟ್ಯಂತರ ಬೆಲೆ ಬಾಳುವ ವಿಗ್ರಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ 14 ಕಲ್ಲಿನಲ್ಲಿ ಕೆತ್ತಲಾಗಿದೆ. ಉಳಿದವು ಹಲವಾರು ಕೋಟಿ ಮೌಲ್ಯದ ಲೋಹದಾಗಿದೆ. ಇನ್ನು ಕೆಲವು ಪಂಚಲೋಹಾ ವಿಗ್ರಹಗಳಾಗಿವೆ. ಇವು ಚೋಳರ ಕಾಲದ ವಿಗ್ರಹಗಳಾಗಿದ್ದು ತಮಿಳುನಾಡಿನಾದ್ಯಂತದ ದೇವಾಲಯಗಳಿಂದ ಕಳ್ಳತನವಾಗಿರಬಹುದು ಎಂದು ಶಕ್ತಿವೇಲ್ ತಿಳಿಸಿದ್ದಾರೆ.

ತನ್ನ ಅಜ್ಜನ ಕಾಲದಿಂದಲೂ ವಿಗ್ರಹಗಳು ಇದ್ದವು ಎಂದು ರಾಜರಥಿನಂ ಪೊಲೀಸರಿಗೆ ತಿಳಿಸಿದ್ದಾರೆ. ಪುದುಚೇರಿಯಲ್ಲಿ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಿಲ್ಲ ಎಂದು ಶಕ್ತಿವೆಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com