ಗಿಲ್ಗಿಟ್‌- ಬಾಲ್ಟಿಸ್ತಾನ ವಿಧಾನಸಭೆಗೆ ಚುನಾವಣೆ ನಡೆಸಲು ಪಾಕ್ ನಿರ್ಧಾರ: ಭಾರತ ತೀವ್ರ ಖಂಡನೆ

ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಪಾಕಿಸ್ತಾನದ ನಿರ್ಧಾರವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಮಿಲಿಟರಿ ಆಕ್ರಮಿತ ವಲಯದ ಸ್ಥಿತಿಯನ್ನು  ಬದಲಾಯಿಸುವ ಯಾವುದೇ ಕ್ರಮಕ್ಕೆ ಯಾವುದೇ ಕಾನೂನು ಆಧಾರಗಳಿಲ್ಲ ಎಂದಿದೆ. 
ಪಾಕ್ ಪ್ರಧಾನಿ ಇಮ್ರಾನ್ ಖಾನ್
ಪಾಕ್ ಪ್ರಧಾನಿ ಇಮ್ರಾನ್ ಖಾನ್

ನವದೆಹಲಿ: ಗಿಲ್ಗಿಟ್‌- ಬಾಲ್ಟಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವ ಪಾಕಿಸ್ತಾನದ ನಿರ್ಧಾರವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಮಿಲಿಟರಿ ಆಕ್ರಮಿತ ವಲಯದ ಸ್ಥಿತಿಯನ್ನು  ಬದಲಾಯಿಸುವ ಯಾವುದೇ ಕ್ರಮಕ್ಕೆ ಯಾವುದೇ ಕಾನೂನು ಆಧಾರಗಳಿಲ್ಲ ಎಂದಿದೆ.

ಗಿಲ್ಗಿಟ್‌- ಬಾಲ್ಟಿಸ್ತಾನ ಶಾಸಕಾಂಗ ಸಭೆಗೆ ನವೆಂಬರ್ 15 ರಂದು ಚುನಾವಣೆ ನಡೆಯಲಿದೆ ಎಂದು ಪಾಕಿಸ್ತಾನ ಪ್ರಕಟಿಸಿದೆ.

"ಗಿಲ್ಗಿಟ್‌- ಬಾಲ್ಟಿಸ್ತಾನ ಎಂದು ಕರೆಯಲ್ಪಡುವ ಮಿಲಿಟರಿ ಆಕ್ರಮಿತ ವಲಯವನ್ನು  ಬದಲಾಯಿಸಲು ಪಾಕಿಸ್ತಾನದ ಯಾವುದೇ ಕ್ರಮವು ಯಾವುದೇ ಕಾನೂನು ಆಧಾರವನ್ನು ಹೊಂದಿಲ್ಲ ಮತ್ತು ಅದು ಸಂಪೂರ್ಣವಾಗಿ ಅನೂರ್ಜಿತವಾಗಿದೆ "ಎಂದು ವಿದೇಶಾಂಗ ಸಚಿವಾಲಯದ ವಕ್ತಾರ (ಎಂಇಎ) ಅನುರಾಗ್ ಶ್ರೀವಾಸ್ತವ ಹೇಳಿದರು 

ಈ ವಿಷಯದ ಬಗ್ಗೆ ಪಾಕಿಸ್ತಾನದ ದ ಹೇಳಿಕೆಗಳನ್ನು ಉಲ್ಲೇಖಿಸಿದ ಅವರು, ಭಾರತದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ಪಾಕಿಸ್ತಾನಕ್ಕೆ ಯಾವುದೇ ಹಕ್ಕಿಲ್ಲ "ನಮ್ಮ ನಿಲುವು ಯಾವಾಗಲೂ ಸ್ಪಷ್ಟ ಮತ್ತು ಸ್ಥಿರವಾಗಿರುತ್ತದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಕೇಂದ್ರಾಡಳಿತ ಪ್ರದೇಶಗಳ ಸಂಪೂರ್ಣ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿದ್ದು,ಅದು ಹಾಗೆಯೇ ಉಳಿಯುತ್ತವೆ" ಎಂದು ಶ್ರೀವಾಸ್ತವ ಹೇಳಿದರು.

ಈ ವರ್ಷದ ಆರಂಭದಲ್ಲಿ ನೀಡಿದ ತೀರ್ಪಿನಲ್ಲಿ, ಈ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಅನುಕೂಲವಾಗುವಂತೆ  ಇಸ್ಲಾಮಾಬಾದ್‌ಗೆ 2018 ರ ಆಡಳಿತಾತ್ಮಕ ಆದೇಶವನ್ನು ತಿದ್ದುಪಡಿ ಮಾಡಲು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನುಮತಿ ನೀಡಿತು.

ಗಿಲ್ಗಿಟ್‌- ಬಾಲ್ಟಿಸ್ತಾನ ಆದೇಶ 2018 ರ ಆಡಳಿತಾತ್ಮಕ ಬದಲಾವಣೆಗಳಿಗೆ ಅನುಮೋದನೆ ಸಿಕ್ಕಿದೆ. ಇದರಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿ ಶಾಸನ ಮಾಡಲು ಅಧಿಕಾರ ಪಡೆದಿದ್ದಾರೆ. ತೀರ್ಪಿನ ನಂತರ, ಭಾರತವು ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರಿಗೆ ಎಚ್ಚರಿಕೆ ನೀಡಿತ್ತು  ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿತ್ತು.

ಗಿಲ್ಗಿಟ್‌- ಬಾಲ್ಟಿಸ್ತಾನ ಪ್ರದೇಶಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತವು ಪಾಕಿಸ್ತಾನಕ್ಕೆ ಸ್ಪಷ್ಟವಾಗಿ ತಿಳಿಸಿದೆ. ಗಿಲ್ಗಿಟ್‌- ಬಾಲ್ಟಿಸ್ತಾನ  ದಲ್ಲಿ ಮತದಾನ ಆಗಸ್ಟ್ 18 ರಂದು ನಡೆಯಬೇಕಿತ್ತು, ಆದರೆ ಜುಲೈ 11 ರಂದು ಪಾಕಿಸ್ತಾನದ ಚುನಾವಣಾ ಆಯೋಗವು ಕೊರೋನಾ ಸ್ ಸಾಂಕ್ರಾಮಿಕ ರೋಗದಿಂದಾಗಿ ಅವುಗಳನ್ನು ಮುಂದೂಡಿದೆ. ವಿಧಾನಸಭೆಯ 24 ಸಾಮಾನ್ಯ ಸ್ಥಾನಗಳಿಗೆ ಮತದಾನ ನಡೆಯಲಿದೆ.ಹಿಂದಿನ ವಿಧಾನಸಭೆಯ ಐದು ವರ್ಷಗಳ ಅವಧಿ ಜೂನ್ 24 ರಂದು ಕೊನೆಗೊಂಡಿದ್ದು, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನ ಐದು ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com