ಪತ್ನಿ, ನಾದಿನಿಯನ್ನು ಕೊಂದು ಶವಗಳೊಂದಿಗೆ ಸೆಕ್ಸ್ ಮಾಡಿದ, ಅತ್ತೆಯನ್ನೂ ಬಿಡದ 27ರ ಕಾಮುಕ

ಪತ್ನಿ, ನಾದಿನಿ ಮತ್ತು ಅತ್ತೆಯನ್ನು ಕೊಂದು ಅವರ ಶವಗಳೊಂದಿಗೆ ವ್ಯಕ್ತಿಯೋರ್ವ ಸೆಕ್ಸ್ ಮಾಡಿರುವ ವಿಲಕ್ಷಣ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ವರದಿಯಾಗಿದೆ.

Published: 25th September 2020 12:25 PM  |   Last Updated: 25th September 2020 12:25 PM   |  A+A-


Rape

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : Online Desk

ಚಂಡೀಘಡ: ಪತ್ನಿ, ನಾದಿನಿ ಮತ್ತು ಅತ್ತೆಯನ್ನು ಕೊಂದು ಅವರ ಶವಗಳೊಂದಿಗೆ ವ್ಯಕ್ತಿಯೋರ್ವ ಸೆಕ್ಸ್ ಮಾಡಿರುವ ವಿಲಕ್ಷಣ ಘಟನೆ ಹರಿಯಾಣದ ಪಾಣಿಪತ್ ನಲ್ಲಿ ವರದಿಯಾಗಿದೆ.

ಸೋನೆಪತ್ ಜಿಲ್ಲೆಯ ಪಟ್ಟಿಕಲಿಯಾನ ಗ್ರಾಮದ ನಿವಾಸಿ 27 ವರ್ಷದ ನೂರ್ ಹಸನ್ ಎಂಬಾತ ಈ ಕುಕೃತ್ಯ ಎಸಗಿದ್ದು, ಸೆಪ್ಟೆಂಬರ್ 6 ರಂದು ಜಿಲ್ಲೆಯ ಸಮಲ್ಖ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 3 ವಿಭನ್ನ ಸ್ಥಳಗಳಲ್ಲಿ ಒಂದೇ ಕುಟುಂಬದ ಮೂವರು ಹೆಣ್ಣುಮಕ್ಕಳ ಮೃತದೇಹಗಳು ಪತ್ತೆಯಾಗಿತ್ತು. ಈ ತ್ರಿವಳಿ ಕೊಲೆ ಪ್ರಕರಣ ಹರ್ಯಾಣದಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಪೊಲೀಸರು ಈ ಕೊಲೆ ಪ್ರಕರಣವನ್ನು ಭೇದಿಸಿದ್ದು, ಕೊಲೆ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಮೂಲಗಳ ಪ್ರಕಾರ 27 ವರ್ಷದ ನೂರ್ ಹಸನ್ ಎಂಬಾತ ತನ್ನ ಪತ್ನಿಮಧು ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದ. ಇದೇ ಕಾರಣಕ್ಕೆ ಆಕೆಯೊಂದಿಗೆ ಜಗಳ ಮಾಡಿಕೊಂಡಿದ್ದ. ಇದೇ ಕೋಪದಲ್ಲಿ ಸೆಪ್ಟೆಂಬರ್ 5 ರಂದು ಡ್ರಗ್ ಸೇವಿಸಿ ಮನೆಗೆ ಬಂದಿದ್ದ ನೂರ್ ಹಸನ್, ತನ್ನ ಪತ್ನಿ ಮಧು (25 ವರ್ಷ) ನಾದಿನಿ ಮನಿಷಾ (18 ವರ್ಷ)ರನ್ನು ಹರಿತವಾದ ಚಾಕುವಿನಿಂದ ಇರಿದು ಕೊಂದು ಹಾಕಿದ್ದಾನೆ. ಬಳಿಕ ಅವರ ಮೃತದೇಹಗಳ ಜೊತೆ ಸೆಕ್ಸ್ ಮಾಡಿದ್ದಾನೆ.  ಬಳಿಕ ಮೂರೂ ಮೃತದೇಹಗಳನ್ನು ಭಿನ್ನ ಭಿನ್ನ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಎಸೆದಿದ್ದಾನೆ. 

ಸೆಪ್ಟೆಂಬರ್ 8 ರಂದು ಬರ್ಷಮ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಗೆ ಹೋಗಿ ಆಕೆಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ನಂತರ ಆಕೆಯ ಗುರುತನ್ನು ಪತ್ತೆ ಮಾಡಬಾರದೆಂದು ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದಾನೆ ಎಂದು ಪೊಲಿಸರು ತಿಳಿಸಿದ್ದಾರೆ. ಮೃತದೇಹಗಳು ಸೆಪ್ಟೆಂಬರ್ 6, 7 ಮತ್ತು 8 ರಂದು ಮೂರು ವಿಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿದ್ದವು. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ಸೆಪ್ಟೆಂಬರ್ 11 ರಂದು ಪಾಣಿಪತ್ ಉಪ ಪೊಲೀಸ್ ವರಿಷ್ಠಾಧಿಕಾರಿ ಅಡಿಯಲ್ಲಿ ಒಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಆರೋಪಿ ನೂರ್ ಹಸನ್ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಮಲ್ಖ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಆದರೆ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನ ಪಟ್ಟಿದ್ದ. ಅಲ್ಲದೇ ತನ್ನ ಸಂಬಂಧಕ್ಕೆ ಅತ್ತೆಯ ಮನೆಯವರ ಬೆಂಬಲ ಪಡೆಯುತ್ತಿದ್ದಾಳೆ ಎಂದು ಶಂಕಿಸಿ ಈ ಕೊಲೆಗಳನ್ನು ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ವಿಚಾರಣೆ ವೇಳೆ ಮೂವರು ಮಹಿಳೆಯರನ್ನು ಕೊಂದು ಅವರ ಶವಗಳ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp