ಕೋವಿಡ್-19: ಉಗ್ರರಿಂದ ಆರ್ಥಿಕ, ಭಾವನಾತ್ಮಕ ಯಾತನೆಗಳ ದುರುಪಯೋಗ- ವಿಶ್ವಸಂಸ್ಥೆಯಲ್ಲಿ ಭಾರತ

ವ್ಯಾಪಕವಾದ ಕೋವಿಡ್-19 ಕಾರಣ, ಸಮಾಜಗಳ ಒಗ್ಗೂಡಿಸುವಿಕೆಯನ್ನು ಭಂಗಗೊಳಿಸಲು ಲಾಕ್‌ಡೌನ್‌ಗಳಿಂದ ಉಂಟಾಗುವ ಆರ್ಥಿಕ ಮತ್ತು ಭಾವನಾತ್ಮಕ ಯಾತನೆಗಳನ್ನು ದುರುಪಯೋಗಪಡಿಸಿಕೊಳ್ಳುವ ದುಷ್ಕೃತ್ಯಗಳನ್ನು ಉಗ್ರರು ನಡೆಸುತ್ತಿದ್ದಾರೆ ಎಂದು ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ  45 ನೇ ಅಧಿವೇಶನದಲ್ಲಿ ತಿಳಿಸಿದೆ.

Published: 25th September 2020 09:30 PM  |   Last Updated: 26th September 2020 08:48 PM   |  A+A-


Indias_First_Secretary_to_UN_Pawan_Badhe1

ಭಾರತದ ಪವನ್ ಬಾಧೆ

Posted By : Nagaraja AB
Source : The New Indian Express

ಜಿನಿವಾ: ವ್ಯಾಪಕವಾದ ಕೋವಿಡ್-19 ಕಾರಣ, ಸಮಾಜಗಳ ಒಗ್ಗೂಡಿಸುವಿಕೆಯನ್ನು ಭಂಗಗೊಳಿಸಲು ಲಾಕ್‌ಡೌನ್‌ಗಳಿಂದ ಉಂಟಾಗುವ ಆರ್ಥಿಕ ಮತ್ತು ಭಾವನಾತ್ಮಕ ಯಾತನೆಗಳನ್ನು ದುರುಪಯೋಗಪಡಿಸಿಕೊಳ್ಳುವ ದುಷ್ಕೃತ್ಯಗಳನ್ನು ಉಗ್ರರು ನಡೆಸುತ್ತಿದ್ದಾರೆ ಎಂದು ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ  45 ನೇ ಅಧಿವೇಶನದಲ್ಲಿ ತಿಳಿಸಿದೆ.

ಜಿನಿವಾದಲ್ಲಿ ಮಾನವ ಹಕ್ಕುಗಳ ಮಂಡಳಿಯ 45ನೇ ಅಧಿವೇಶನದಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಮಿಷನ್ ಮೊದಲ ಕಾರ್ಯದರ್ಶಿ ಪವನ್ ಬಾದೆ, ಭದ್ರತಾ ಪಡೆ ಮತ್ತು ಆರೋಗ್ಯ ಕಾರ್ಯಕರ್ತರನ್ನು ಗುರಿಯಾಗಿಸಲು ಭಯೋತ್ಪಾದಕ ಗುಂಪುಗಳು ಬೆಂಬಲಿಗರಿಗೆ ಸೂಚಿಸಿದ್ದಾರೆ.ಚಾರಿಟಬಲ್ ಚಟುವಟಿಕೆ ಹೆಸರಿನಲ್ಲಿ  ನಿಷೇಧಿತ ಉಗ್ರ ಸಂಘಟನೆಗಳಿಂದ ನಿಧಿ ಸಂಗ್ರಹಣೆ ಮತ್ತೊಂದು ಟ್ರೆಂಡ್ ಆಗಿದೆ. ವಾಸ್ತವವಾಗಿ ಇದನ್ನು ಉಗ್ರರಿಗೆ ಹಣಕಾಸು ನೀಡಲು ಬಳಸಿಕೊಳ್ಳಲಾಗುತ್ತಿದೆ ಎಂದರು.

ಆನ್‌ಲೈನ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ  ದ್ವೇಷ ಭಾಷಣಗಳು, ನಕಲಿ ಸುದ್ದಿಗಳು, ವೀಡಿಯೊಗಳ ಮೂಲಕ ತಪ್ಪು ಮಾಹಿತಿಯನ್ನು ಪ್ರಸಾರ ಮಾಡಲು ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದಾರೆ. ಬಡ ವ್ಯಕ್ತಿಗಳೊಂದಿಗೆ  ಸಂಪರ್ಕವನ್ನು ಸ್ಥಾಪಿಸುವುದು ಮತ್ತು ಅವರನ್ನು ತಮ್ಮ ತಂಡಕ್ಕೆ ನೇಮಕ ಮಾಡಿಕೊಳ್ಳುವುದು ಇವರ ಉದ್ದೇಶವಾಗಿದೆ ಎಂದು ಪವನ್ ಬಾಧೆ ತಿಳಿಸಿದರು.

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp