ಬಾರದೂರಿಗೆ ಹೊರಟು ನಿಂತ 'ಬಾಲು': ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಅಂತ್ಯಕ್ರಿಯೆ

ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಎಂಬಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಅವರ ಅಂತಿಮ ಯಾತ್ರೆಯ ವಿಧಿ ವಿಧಾನ ಕಾರ್ಯಗಳು, ಧಾರ್ಮಿಕ ಸಂಪ್ರದಾಯಗಳು ನೆರವೇರುತ್ತಿವೆ.

Published: 26th September 2020 11:51 AM  |   Last Updated: 26th September 2020 12:46 PM   |  A+A-


Final rites

ಅಂತ್ಯಕ್ರಿಯೆ ವಿಧಿ ವಿಧಾನ

Posted By : Sumana Upadhyaya
Source : ANI

ಚೆನ್ನೈ: ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂ ಎಂಬಲ್ಲಿರುವ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ರೆಡ್ ಹಿಲ್ಸ್ ಫಾರ್ಮ್ ಹೌಸ್ ನಲ್ಲಿ ಅವರ ಅಂತಿಮ ಯಾತ್ರೆಯ ವಿಧಿ ವಿಧಾನ ಕಾರ್ಯಗಳು, ಧಾರ್ಮಿಕ ಸಂಪ್ರದಾಯಗಳು ನೆರವೇರುತ್ತಿವೆ. ಸಂಪೂರ್ಣ ಪೊಲೀಸ್ ಗೌರವದೊಂದಿಗೆ ಸಾಗುತ್ತಿದೆ.

ಎಸ್ ಪಿಬಿಯವರ ಪುತ್ರ ಹಿನ್ನೆಲೆ ಗಾಯಕ ಎಸ್ ಪಿ ಚರಣ್ ತಂದೆಯ ಅಂತಿಮ ಯಾತ್ರೆಯ ವಿಧಿ ವಿಧಾನಗಳನ್ನು ಶೈವ ಸಂಪ್ರದಾಯದಂತೆ ಕುಟುಂಬದ ಇತರ ಸದಸ್ಯರ ಸಮ್ಮುಖದಲ್ಲಿ ನೆರವೇರಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು, ಸರ್ಕಾರದ ಜನಪ್ರತಿನಿಧಿಗಳು, ಗಣ್ಯರು ಸೇರಿದ್ದಾರೆ.

ತಮ್ಮ ನೆಚ್ಚಿನ ಗಾಯಕನನ್ನು ಅಂತಿಮವಾಗಿ ದುಃಖಭರಿತ, ಭಾರವಾದ ಹೃದಯದಿಂದ, ಸಕಲ ಸರ್ಕಾರಿ ಗೌರವಗಳೊಂದಿಗೆ ಕಳುಹಿಸಲಾಗುತ್ತಿದೆ.

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp