ಮೋದಿ ಸರ್ಕಾರ ಕೃಷಿ ಮಸೂದೆ ಹಿಂಪಡೆದು, ಎಂಎಸ್‌ಪಿ ಗ್ಯಾರಂಟಿ ನೀಡಬೇಕು: ರಾಹುಲ್ ಗಾಂಧಿ

ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸರ್ಕಾರ ಯಾವುದೇ ವಿಳಂಬ ಮಾಡದೆ ಕೃಷಿ ವಲಯದ ಮಸೂದೆಗಳನ್ನು ಹಿಂಪಡೆದು ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೃಷಿ ಮಸೂದೆಗಳಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಸರ್ಕಾರ ಯಾವುದೇ ವಿಳಂಬ ಮಾಡದೆ ಕೃಷಿ ವಲಯದ ಮಸೂದೆಗಳನ್ನು ಹಿಂಪಡೆದು ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದ ಜನತೆ ಮತ್ತು ಕೃಷಿಕರಿಗೆ ಟ್ವಿಟರ್‌ ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು, ಕಾಂಗ್ರೆಸ್‌ ಸಂಸತ್ತಿನಲ್ಲಿ ಅನುಮೋದನೆಗೊಂಡಿರುವ ಈ ಮಸೂದೆಯ ವಿರುದ್ಧ ಹೋರಾಡುತ್ತಿರುವ ದೇಶಾದ್ಯಂತದ ರೈತರ ಜೊತೆಗಿದೆ ಎಂದಿದ್ದಾರೆ.

ಸರ್ಕಾರ ತನ್ನ ನೀತಿಗಳಿಂದ ಜನರ ಜೀವನೋಪಾಯದ ಮೇಲೆ ದಾಳಿ ನಡೆಸುತ್ತಿದೆ. ಮೊದಲು ನೋಟು ಅಮಾನ್ಯೀಕರಣ, ನಂತರ ಜಿಎಸ್‌ಟಿ ನಂತರ ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರಿಗೆ ಹಣಕಾಸಿನ ನೆರವು ನೀಡದೆ ಸತಾಯಿಸುತ್ತಿದೆ. ಈಗ ರೈತರನ್ನು ಕಾರ್ಪೊರೇಟ್‌ ಕಂಪನಿಗಳ ಗುಲಾಮರನ್ನಾಗಿಸಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಕೃಷಿ ಮಸೂದೆಗಳನ್ನು ವಿರೋಧಿಸಿ ರಾಹುಲ್ ಗಾಂಧಿ 'ರೈತರಿಗಾಗಿ ಮಾತನಾಡಿ' ಅಭಿಯಾನವನ್ನು ಪ್ರಾರಂಭಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತರನ್ನು ಶೋಷಿಸುತ್ತಿದ್ದು ಅದರ ವಿರುದ್ಧ ಜನ ದನಿ ಎತ್ತಬೇಕು. ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಮೂರು ಮಸೂದೆಗಳನ್ನು ಅಂಗೀಕರಿಸಿದ್ದು, ರಾಷ್ಟ್ರಪತಿಗಳ ಒಪ್ಪಿಗೆಗಾಗಿ ಕಾಯುತ್ತಿವೆ. ಮೋದಿ ಸರ್ಕಾರವು ರೈತರ ದೌರ್ಜನ್ಯ ಮತ್ತು ಶೋಷಣೆಗೆ ವಿರುದ್ಧವಾಗಿ ನಾವು ಒಟ್ಟಾಗಿ ಧ್ವನಿ ಎತ್ತೋಣ ಎಂದು ಗಾಂಧಿ ಟ್ವೀಟ್ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com