ಮೋದಿ- ರಾಜಪಕ್ಸೆ ವರ್ಚುವಲ್ ಸಭೆ: ಲಂಕಾದಲ್ಲಿ ಅಲ್ಪಸಂಖ್ಯಾತ ತಮಿಳರಿಗೆ ಅಧಿಕಾರ ಹಂಚಿಕೆಗೆ ಭಾರತ ಒತ್ತು

ಸಮಾನತೆ, ನ್ಯಾಯ, ಶಾಂತಿ ಮತ್ತು ಘನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ಶಾಂತಿ, ಸಾಮರಸ್ಯದ ಪ್ರಕ್ರಿಯೆಯನ್ನು ಮುಂದೆ ತೆಗೆದುಕೊಂಡು ಹೋಗಲು ಶ್ರೀಲಂಕಾ ಸರ್ಕಾರ, ದ್ವೀಪದ ಅಲ್ಪಸಂಖ್ಯಾತ ತಮಿಳರಿಗೆ ಅಧಿಕಾರ ಹಂಚಿಕೆಯಾಗಬೇಕು ಎಂಬ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಮುಂದೆ ಪ್ರಸ್ತಾಪಿಸಿದ್ದಾರೆ.
ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಜೊತೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಜೊತೆ ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ಸಮಾನತೆ, ನ್ಯಾಯ, ಶಾಂತಿ ಮತ್ತು ಘನತೆಯ ನಿರೀಕ್ಷೆಗಳನ್ನು ಸಾಕಾರಗೊಳಿಸಲು ಮತ್ತು ಶಾಂತಿ, ಸಾಮರಸ್ಯದ ಪ್ರಕ್ರಿಯೆಯನ್ನು ಮುಂದೆ ತೆಗೆದುಕೊಂಡು ಹೋಗಲು ಶ್ರೀಲಂಕಾ ಸರ್ಕಾರ, ದ್ವೀಪದ ಅಲ್ಪಸಂಖ್ಯಾತ ತಮಿಳರಿಗೆ ಅಧಿಕಾರ ಹಂಚಿಕೆಯಾಗಬೇಕು ಎಂಬ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಮುಂದೆ ಪ್ರಸ್ತಾಪಿಸಿದ್ದಾರೆ.

ಇಂದು ಪ್ರಧಾನಿ ಮೋದಿ ಅವರು ರಾಜಪಕ್ಸೆ ಅವರೊಂದಿಗೆ ವರ್ಚುವಲ್ ದ್ವಿಪಕ್ಷೀಯ ಸಭೆ ನಡೆಸಿದರು. ಈ ವೇಳೆ ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಒತ್ತಿ ಹೇಳಿದರು. ಶಾಂತಿ ಮತ್ತು ಸಾಮರಸ್ಯ ಪ್ರಕ್ರಿಯೆಗೆ ಇದು ಅವಶ್ಯಕವಾಗಿದೆ ಎಂದು ವಿದೇಶಾಂಗ ಸಚಿವಾಲಯ(ಎಂಇಎ) ತಿಳಿಸಿದೆ.

13ನೇ ತಿದ್ದುಪಡಿಯು ನೆರೆಯ ದೇಶದಲ್ಲಿ ತಮಿಳು ಸಮುದಾಯಕ್ಕೆ ಅಧಿಕಾರ ಹಂಚಿಕೆಗೆ ಅವಕಾಶ ನೀಡುತ್ತದೆ.

1987ರ ಇಂಡೋ-ಶ್ರೀಲಂಕಾ ಒಪ್ಪಂದದ ನಂತರ ತರಲಾದ 13ನೇ ತಿದ್ದುಪಡಿಯನ್ನು ಜಾರಿಗೆ ತರಲು ಭಾರತ, ಶ್ರೀಲಂಕಾವನ್ನು ಒತ್ತಾಯಿಸುತ್ತಿದೆ.

'ಭಾರತ ಮತ್ತು ಶ್ರೀಲಂಕಾ ನಡುವೆ ಹೊಸ ಅಧ್ಯಾಯವನ್ನು ಶುರುಮಾಡುವ ಅವಕಾಶ ನಮಗೆ ಬಂದೊಗಿದೆ. ಉಭಯ ದೇಶಗಳ ನಡುವಣ ಜನರೂ ಇಂಥ ಬೆಳವಣಿಗೆಯನ್ನು ಹೊಸ ನಿರೀಕ್ಷೆಗಳೊಂದಿಗೆ ಗಮನಿಸುತ್ತಿದ್ದಾರೆ' ಎಂದೂ ಮೋದಿ ಹೇಳಿದರು.

ರಾಜಪಕ್ಸ ಅವರು ಶ್ರೀಲಂಕಾದ ಪ್ರಧಾನಿಯಾಗಿ ಆ. 9ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಶ್ರೀಲಂಕಾ ಜೊತೆಗಿನ ಸಂಬಂಧ ವೃದ್ಧಿಗೆ ಭಾರತ ಆದ್ಯತೆ ನೀಡಲಿದೆ ಎಂದ ಮೋದಿ ಅವರು 'ಸಾಗರ್' (ಸರ್ವ ವಲಯಗಳಲ್ಲೂ ಸುರಕ್ಷತೆ ಮತ್ತು ಅಭಿವೃದ್ಧಿ) ಯೋಜನೆ ಕುರಿತ ನೀತಿ ಉಲ್ಲೇಖಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com