ಕಾರ್ಮಿಕ ವಿಧೇಯಕದಿಂದ ಟ್ರೇಡ್ ಯೂನಿಯನ್ ಗಳು ದುರ್ಬಲ, ಕಾರ್ಮಿಕರ ಭದ್ರತೆಗೆ ವಿರುದ್ಧ: ಕಾಂಗ್ರೆಸ್

ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಮಸೂದೆಗಳು ಕಾರ್ಮಿಕರ ಭದ್ರತಗೆ ವಿರುದ್ಧವಾಗಿದ್ದು, ಟ್ರೇಡ್ ಯೂನಿಯನ್ ಗಳನ್ನು ದುರ್ಬಲಗೊಳಿಸಲಿವೆ ಎಂದು ಕಾಂಗ್ರೆಸ್ ಹೇಳಿದೆ. 
ಕಾರ್ಮಿಕ ವಿಧೇಯಕದಿಂದ ಟ್ರೇಡ್ ಯೂನಿಯನ್ ಗಳು ದುರ್ಬಲ, ಕಾರ್ಮಿಕರ ಭದ್ರತೆಗೆ ವಿರುದ್ಧ; ಕಾಂಗ್ರೆಸ್
ಕಾರ್ಮಿಕ ವಿಧೇಯಕದಿಂದ ಟ್ರೇಡ್ ಯೂನಿಯನ್ ಗಳು ದುರ್ಬಲ, ಕಾರ್ಮಿಕರ ಭದ್ರತೆಗೆ ವಿರುದ್ಧ; ಕಾಂಗ್ರೆಸ್

ನವದೆಹಲಿ: ಕೇಂದ್ರ ಸರ್ಕಾರ ಸಂಸತ್ ನಲ್ಲಿ ಅಂಗೀಕರಿಸಿರುವ ಕಾರ್ಮಿಕರಿಗೆ ಸಂಬಂಧಿಸಿದ ಹೊಸ ಮಸೂದೆಗಳು ಕಾರ್ಮಿಕರ ಭದ್ರತಗೆ ವಿರುದ್ಧವಾಗಿದ್ದು, ಟ್ರೇಡ್ ಯೂನಿಯನ್ ಗಳನ್ನು ದುರ್ಬಲಗೊಳಿಸಲಿವೆ ಎಂದು ಕಾಂಗ್ರೆಸ್ ಹೇಳಿದೆ.  

ಕಂಪನಿಗಳು ಸರ್ಕಾರದ ಅನುಮತಿ ಇಲ್ಲದೆಯೇ ಸಿಬ್ಬಂದಿಗಳನ್ನು ಕಡಿತಗೊಳಿಸುವ ಅಧಿಕಾರದ ಮಿತಿಯನ್ನು ಈ ಹಿಂದಿದ್ದ 100 ರಿಂದ 300 ಕ್ಕೆ ಏರಿಕೆ ಮಾಡಲು ಹೊಸ ಮಸೂದೆಯಲ್ಲಿ ಅವಕಾಶ ನೀಡಲಾಗಿದೆ. 

ಕಾಂಗ್ರೆಸ್ ನ ಹಿರಿಯ ನಾಯಕ, ಕಾರ್ಮಿಕ ಇಲಾಖೆಯ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಈ ವಿಧೇಯಕಗಳ ಬಗ್ಗೆ ಮಾತನಾಡಿದ್ದು,  ಹೊಸ ಕಾನೂನಿನಿಂದ ಉದ್ಯಮ ಮಾಡುವುದು ಸರಳವಾಗಲಿದೆ ಎಂಬುದು ಸುಳ್ಳು ಎಂದು ಹೇಳಿದ್ದಾರೆ. 

ಟ್ರೇಡ್ ಯೂನಿಯನ್ ಗಳನ್ನು ಈ ಕಾನೂನಿನ ಮೂಲಕ ದುರ್ಬಲಗೊಳಿಸಲಾಗಿದೆ. ಕಾರ್ಮಿಕರ ಭದ್ರತೆಯನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ರಾಜ್ಯಗಳ ಅಧಿಕಾರವನ್ನೂ ಈ ಕಾನೂನಿನ ಮೂಲಕ ಕೇಂದ್ರ ಸರ್ಕಾರ ಕಸಿದುಕೊಂಡಿದೆ.  ಈ ಕಾನೂನು ಕಾರ್ಮಿಕರ ವಿರೋಧಿ, ಇದನ್ನು ವಿರೋಧಿಸುವುದು ತುಂಬಾ ಮುಖ್ಯ, ಎಲ್ಲಾ ಪಕ್ಷಗಳೂ ಇದನ್ನು ವಿರೋಧಿಸಬೇಕು, ಮೋದಿ ಸರ್ಕಾರ ಕೇವಲ ಕಾರ್ಪೊರೇಟ್ ಗಳಿಗೆ ಬೆಂಬಲ ನೀಡುತ್ತದೆ ಎಂದು ಖರ್ಗೆ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com