21 ತಿಂಗಳೊಳಗೆ ಹೊಸ ಸಂಸತ್‌ ಕಟ್ಟಡದ ನಿರ್ಮಾಣ ಪೂರ್ಣ: ಸ್ಪೀಕರ್

ಸಂಸತ್ತಿನ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, 21 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಶುಕ್ರವಾರ ಹೇಳಿದ್ದಾರೆ.
ಓಂ ಬಿರ್ಲಾ
ಓಂ ಬಿರ್ಲಾ

ನವದೆಹಲಿ: ಸಂಸತ್ತಿನ ಹೊಸ ಕಟ್ಟಡದ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, 21 ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಸ್ಪೀಕರ್‌ ಓಂ ಬಿರ್ಲಾ ಶುಕ್ರವಾರ ಹೇಳಿದ್ದಾರೆ.

ಬಿರ್ಲಾ ಅವರ ಪ್ರಕಾರ, ಕೇಂದ್ರದ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಂಗವಾಗಿ ಪ್ರಸ್ತುತ ಇರುವ 93 ವರ್ಷಗಳ ಹಳೆಯ  ಸಂಸತ್ ಕಟ್ಟಡದ  ಎದುರು 13 ಎಕರೆ ಜಾಗದಲ್ಲಿ ಬರಲಿದೆ,  ಸಚಿವಾಲಯ ಮತ್ತು ಭದ್ರತಾ ಸಿಬ್ಬಂದಿಗೆ ಸ್ವಾಗತ ಬ್ಯಾರಕ್‌ಗಳ ಮನೆಗಳು ಹಾಗೂ ಸಣ್ಣ ನರ್ಸರಿಯೊಂದು ಇರಲಿದ್ದು, ಒಟ್ಟಾರೇಯಾಗಿ 892 ಕೋಟಿ ರೂಪಾಯಿಯನ್ನು ನೂತನ ಕಟ್ಟಡ ನಿರ್ಮಾಣಕ್ಕೆ ವೆಚ್ಚ ಮಾಡಲಾಗುತ್ತಿದೆ.

ಈ ತಿಂಗಳ ಆರಂಭದಲ್ಲಿ ಟಾಟಾ ಪ್ರಾಜೆಕ್ಟ್ ನೂತನ ಕಟ್ಟಡ ನಿರ್ಮಾಣದ ಟೆಂಡರ್ ಪಡೆದುಕೊಂಡಿತು. ಕೋವಿಡ್-19 ಸಂದರ್ಭದಲ್ಲಿ ಹಣವನ್ನು ನೂತನ ಸಂಸತ್ ಭವನಕ್ಕಾಗಿ ದುಂದುವೆಚ್ಚ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್, ಎನ್ ಸಿಪಿ, ತೃಣಮೂಲ ಕಾಂಗ್ರೆಸ್, ಡಿಎಂಕೆ ಮತ್ತಿತರ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com