ಭಾರತ-ಚೀನಾ ಗಡಿ ಬಿಕ್ಕಟ್ಟು: ಗಡಿಯಲ್ಲಿ ಯುದ್ಧ ಟ್ಯಾಂರ್ಗಳನ್ನು ನಿಯೋಜಿಸಿದ ಭಾರತ

ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು ಶಮನಗೊಳ್ಳುವ ಸೂಚನೆಗಳು ಕಾಣಿಸುತ್ತಿಲ್ಲ. ಆದರೆ ಮುನ್ನೆಚ್ಚರಿಕ ಕ್ರಮವಾಗಿ ಭಾರತ ಗಡಿಯಲ್ಲಿ ಯುದ್ಧ ಟ್ಯಾಂಕ್ಗಳನ್ನು ನಿಯೋಜಿಸಿದೆ.
ಟ್ಯಾಂಕ್
ಟ್ಯಾಂಕ್

ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು ಶಮನಗೊಳ್ಳುವ ಸೂಚನೆಗಳು ಕಾಣಿಸುತ್ತಿಲ್ಲ. ಆದರೆ ಮುನ್ನೆಚ್ಚರಿಕ ಕ್ರಮವಾಗಿ ಭಾರತ ಗಡಿಯಲ್ಲಿ ಯುದ್ಧ ಟ್ಯಾಂಕ್ಗಳನ್ನು ನಿಯೋಜಿಸಿದೆ. 

ಪೂರ್ವ ಲಡಾಖ್ ನಲ್ಲಿ ಟಿ-90, ಟಿ-72 ಟ್ಯಾಂಕ್ ಗಳು ಮತ್ತು ಭೂಸೇನಾ ಹೋರಾಟದ ವಾಹನಗಳನ್ನು ಚುಮಾರ್ ಮತ್ತು ಡೆಮ್ ಚೋಕ್ ಭಾಗಗಳಲ್ಲಿ ನಿಯೋಜಿಸಿದ್ದು ಈ ಸಂಬಂಧ ಕೇಂದ್ರ ಸರ್ಕಾರ ವಿಡಿಯೋ ಬಿಡುಗಡೆ ಮಾಡಿದೆ. 

ವಿಡಿಯೋದಲ್ಲಿ ಟ್ಯಾಂಕ್ ಗಳು ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿಗಳನ್ನು ಹೊತ್ತೊಯ್ಯುವ ವಾಹನಗಳು ಸಾಲಾಗಿ ನಿಂತಿರುವುದು ಕಾಣಿಸುತ್ತದೆ. ಈ ಬಿಎಂಪಿ-2 ವಾಹನಗಳು ಮೈನಸ್ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. 

ಲಡಾಖ್ ಗಡಿಯಲ್ಲಿ ಭಾರತೀಯ ಸೇನೆಯು ಆರು ಸೂಕ್ಷ್ಮ ಪ್ರದೇಶಗಳ ಮೇಲೆ ಸೇನೆ ತನ್ನ ಹಿಡಿತವನ್ನು ಸಾಧಿಸಿತ್ತು. ಈ ಮೂಲಕ ಭಾರತ ಚೀನಾ ವಿರುದ್ಧ ಪಾರಮ್ಯ ಮೆರೆದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com