'ಮಹಾ' ಮಾಜಿ ಸಿಎಂ ಫಡ್ನವೀಸ್ ಜೊತೆ ಭೇಟಿ: ಊಹಾಪೋಹ ಹಿನ್ನೆಲೆ ನಾವೇನು ಶತ್ರುಗಳಲ್ಲ ಎಂದು ರಾವತ್ ಸ್ಪಷ್ಟನೆ

ನನ್ನ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ಸಿದ್ಧಾಂತಗಳ ಕುರಿತು ಭಿನ್ನತೆಗಳಿರಬಹುದು. ಆದರೆ, ನಾವಿಬ್ಬರು ಶತ್ರುಗಳಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ. 
ಸಂಜಯ್ ರಾವತ್
ಸಂಜಯ್ ರಾವತ್

ಮುಂಬೈ: ನನ್ನ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನಡುವೆ ಸಿದ್ಧಾಂತಗಳ ಕುರಿತು ಭಿನ್ನತೆಗಳಿರಬಹುದು. ಆದರೆ, ನಾವಿಬ್ಬರು ಶತ್ರುಗಳಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಅವರು ಭಾನುವಾರ ಸ್ಪಷ್ಟನೆ ನೀಡಿದ್ದಾರೆ. 

ಎನ್'ಡಿಎ ಮೈತ್ರಿಯಿಂದ ಹೊರಬಂದ ಬಳಿಕ ಬಿಜೆಪಿಯ ಕಟು ಟೀಕಾಕಾರರಾದ ಶಿವಸೇನೆ ಸಂಸದ ಸಂಜಯ್ ರಾವತ್ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀನ್ ಅವರು ಶನಿವಾರ ಪರಸ್ಪರ ಭೇಟಿಯಾಗಿರುವುದು ಭಾರೀ ಊಹಾಪೋಹಾಗಳಿಗೆ ದಾರಿ ಮಾಡಿಕೊಟ್ಟಿದೆ. 

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ರಾವತ್ ಅವರು, ಕೆಲ ವಿಚಾರಗಳ ಕುರಿತು ಚರ್ಚೆ ನಡೆಸಲು ನಿನ್ನೆ ಫಡ್ನವೀಸ್ ಅವರನ್ನು ಭೇಟಿ ಮಾಡಿದ್ದೆ. ಫಡ್ನವೀಸ್ ಮಾಜಿ ಮುಖ್ಯಮಂತ್ರಿಗಳಾಗಿದ್ದಾರೆ. ಅಲ್ಲದೆ, ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ನಾಯಕರು ಹಾಗೂ ಬಿಹಾರ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಜವಾಬ್ದಾರಿ ಪಡೆದುಕೊಂಡಿದ್ದಾರೆ. ನನ್ನ ಹಾಗೂ ಫಡ್ನವೀಸ್ ನಡುವೆ ಸಿದ್ಧಾಂತಗಳ ಕುರಿತು ವ್ಯತ್ಯಾಸಗಳಿವೆ. ಆದರೆ, ನಾವಿಬ್ಬರೂ ಶತ್ರುಗಳೇನೂ ಅಲ್ಲ. ಫಡ್ನವೀಸ್ ಅವರನ್ನು ಭೇಟಿಯಾಗಿದ್ದರ ಕುರಿತು ರಾಜ್ಯ ಮುಖ್ಯಮಂತ್ರಿಗಳಿಗೂ ಮಾಹಿತಿ ಎಂದು ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com