ಮಹಾ ಬೆಳವಣಿಗೆ: ಫಡ್ನವಿಸ್-ರೌತ್ ಭೇಟಿ ಬಳಿಕ ಉದ್ಧವ್ ಠಾಕ್ರೆಯನ್ನು ಭೇಟಿ ಮಾಡಿದ ಪವಾರ್!
ಮಹಾರಾಷ್ಟ್ರದಲ್ಲಿ ಸೆ.27 ರಂದು ಸರಣಿ ರಾಜಕೀಯ ಬೆಳವಣಿಗೆಗಳು ಸಂಭವಿಸಿದ್ದು, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್- ಶಿವಸೇನೆಯ ವಕ್ತಾರ ಸಂಜಯ್ ರೌತ್ ಭೇಟಿಯ ಬೆನ್ನಲ್ಲೇ ಎನ್ ಸಿಪಿ ನಾಯಕ ಶರದ್ ಪವಾರ್ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ.
Published: 27th September 2020 09:04 PM | Last Updated: 27th September 2020 09:06 PM | A+A A-

ಶರದ್ ಪವಾರ್, ಉದ್ಧವ್ ಠಾಕ್ರೆ
ಮುಂಬೈ: ಮಹಾರಾಷ್ಟ್ರದಲ್ಲಿ ಸೆ.27 ರಂದು ಸರಣಿ ರಾಜಕೀಯ ಬೆಳವಣಿಗೆಗಳು ಸಂಭವಿಸಿದ್ದು, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್- ಶಿವಸೇನೆಯ ವಕ್ತಾರ ಸಂಜಯ್ ರೌತ್ ಭೇಟಿಯ ಬೆನ್ನಲ್ಲೇ ಎನ್ ಸಿಪಿ ನಾಯಕ ಶರದ್ ಪವಾರ್ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ.
ದೇವೇಂದ್ರ ಫಡ್ನವೀಸ್ ಅವರು ಸಂಜಯ್ ರೌತ್ ಅವರನ್ನು ಭೇಟಿ ಮಾಡಿದ್ದು ಸಂಚಲನ ಮೂಡಿಸಿತ್ತು. ಠಾಕ್ರೆ ನಿವಾಸದಲ್ಲಿ ಉಭಯ ನಾಯಕರ ಸಭೆ ಸುಮಾರು 40 ನಿಮಿಷಗಳ ನಡೆದಿದೆ. ಸಭೆಯಲ್ಲಿ ಯಾವೆಲ್ಲಾ ಅಂಶಗಳು ಚರ್ಚೆಯಾಗಿದೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ದೇವೇಂದ್ರ ಫಡ್ನವೀಸ್ ತಾವು ಶಿವಸೇನೆಯ ಮುಖವಾಣಿ ಸಾಮ್ನಾಗೆ ಸಂದರ್ಶನ ನೀಡಲು ಸಂಜಯ್ ರೌತ್ ನ್ನು ಭೇಟಿ ಮಾಡಿದ್ದಾಗಿ ಹೇಳಿದ್ದರು.