ಕೃಷಿ ಮಸೂದೆ ಅಂಗೀಕಾರದ ವೇಳೆ ನಿಯಮ ಉಲ್ಲಂಘನೆ?: ವಿಡಿಯೋ ಹೇಳುತ್ತಿರುವುದಿಷ್ಟು....

ಸರ್ಕಾರ ಕೃಷಿ ಮಸೂದೆ ಅಂಗೀಕಾರ ಮಾಡಿ ದಿನಗಳೇ ಕಳೆದರೂ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. 
ರಾಜ್ಯಸಭೆ
ರಾಜ್ಯಸಭೆ

ನವದೆಹಲಿ: ಸರ್ಕಾರ ಕೃಷಿ ಮಸೂದೆ ಅಂಗೀಕಾರ ಮಾಡಿ ದಿನಗಳೇ ಕಳೆದರೂ ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಸರ್ಕಾರ ಮಸೂದೆ ಅಂಗೀಕರಿಸುವಾಗ ನಿಯಮ ಉಲ್ಲಂಘನೆ ಮಾಡಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಎನ್ ಡಿಟಿವಿ ಪ್ರಕಟಿಸಿರುವ ವರದಿಯ ಪ್ರಕಾರ, ಸಂಸ್ಥೆಯ ಬಳಿ ಇರುವ ವಿಡಿಯೋದಲ್ಲಿ ಕೃಷಿ ಮಸೂದೆಯ ಅಂಗೀಕಾರದ ವೇಳೆ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂದಿದೆ.

ಪ್ರತಿಭಟನಾ ನಿರತ 8 ಸಂಸದರನ್ನು ಅಮಾನತುಗೊಳಿಸುವುದಕ್ಕೂ ಮುನ್ನ ರಾಜ್ಯಸಭೆಯಲ್ಲಿ ವಿಪಕ್ಷಗಳ ಸಂಸದರ ಬೇಡಿಕೆಯನ್ನು ಸಭಾಧ್ಯಕ್ಷರು ಪರಿಗಣಿಸದೇ ಇದ್ದ ಕಾರಣದಿಂದಾಗಿ ತಾವು ಸದನದ ಬಾವಿಗಿಳಿದು ಪ್ರತಿಭಟಿಸಬೇಕಾಯಿತು ಎಂದು ವಿಪಕ್ಷ ಸದಸ್ಯರು ತಮ್ಮ ನಡೆಯನ್ನು ಸಮರ್ಥಿಸೊಕೊಂಡಿದ್ದಾರೆ.

ಆದರೆ ಕೃಷಿ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿ ಅಂಗೀಕರಿಸಿದ್ದನ್ನು ಸಮರ್ಥಿಸಿಕೊಂಡಿರುವ ಸಭಾಧ್ಯಕ್ಷ ಹರಿವಂಶ್ ಸಿಂಗ್ ಮತಗಳ ವಿಭಜನೆ ಪ್ರಕ್ರಿಯೆ ಮಾಡುವುದಕ್ಕೆ ಪ್ರತಿಪಕ್ಷಗಳ ಸದಸ್ಯರು ತಮ್ಮ ಆಸನದಲ್ಲಿ ಕುಳಿತೇ ಇರಲಿಲ್ಲ ಎಂದು ಹೇಳಿದ್ದಾರೆ.

ಸೆ.20 ರಂದು ಮಧ್ಯಾಹ್ನ 1 ಗಂಟೆಗೆ ಉಪಸಭಾಧ್ಯಕ್ಷರು ಸದನದ ಕಲಾಪವನ್ನು ವಿಸ್ತರಿಸಿದ್ದರು. ಆದರೆ ಸಾಮಾನ್ಯವಾಗಿ ಕಲಾಪವನ್ನು ವಿಸ್ತರಿಸಬೇಕಾದರೆ ಸದನದ ಸಂಪೂರ್ಣ ಒಪ್ಪಿಗೆ ಪಡೆಯಬೇಕಾಗುತ್ತದೆ. ಆದರೆ ಸೆ.20 ರಂದು ಸದನದ ಸದಸ್ಯರು ಕಲಾಪ ಮುಂದೂಡಲು ಆಗ್ರಹಿಸುತ್ತಿದ್ದರೂ ಸಹ ಅದನ್ನು ಪರಿಗಣಿಸದೇ ಉಪಸಭಾಧ್ಯಕ್ಷರು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರ ಮನವಿಯನ್ನಷ್ಟೇ ಪರಿಗಣಿಸಿ ಕಲಾಪವನ್ನು ವಿಸ್ತರಿಸಿದ್ದರು. ಇದನ್ನು ವಿರೋಧಿಸಿ ವಿಪಕ್ಷಗಳ ಸದಸ್ಯರು ಬಾವಿಗಿಳಿದು ಪ್ರತಿಭಟನೆ ಮಾಡಬೇಕಾಯಿತು. ಸದನದ ಸಂಪೂರ್ಣ ಒಪ್ಪಿಗೆ ಪಡೆಯದೇ ಕಲಾಪ ವಿಸ್ತರಿಸಿದ್ದು ರಾಜ್ಯಸಭೆಯ ನಿಯಮ 37 ನ್ನು ಉಲ್ಲಂಘನೆಯಾಗಿದೆ ಎಂಬುದು ಹೊಸದಾಗಿ ಚರ್ಚೆಗೆ ಗ್ರಾಸವಾಗಿರುವ ಅಂಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com