ಕೋವಿಡ್ ಲಸಿಕೆ ಕುರಿತ ಕಾರ್ಯತಂತ್ರ ಮನ್ ಕಿ ಬಾತ್ ಆಗಬೇಕಿದೆ: ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ಕೋವಿಡ್ -19 ಲಸಿಕೆ ಜನರಿಗೆ ಲಭ್ಯವಾಗುವಂತೆ ಮಾಡುವ ಕೇಂದ್ರದ ಕಾರ್ಯತಂತ್ರದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ, ಇದು 'ಮನ್ ಕಿ ಬಾತ್' ಕಾರ್ಯಕ್ರಮದ ವಿಷಯ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೋವಿಡ್ -19 ಲಸಿಕೆ ಜನರಿಗೆ ಲಭ್ಯವಾಗುವಂತೆ ಮಾಡುವ ಕೇಂದ್ರದ ಕಾರ್ಯತಂತ್ರದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ, ಇದು 'ಮನ್ ಕಿ ಬಾತ್' ಕಾರ್ಯಕ್ರಮದ ವಿಷಯ ಎಂದು ಅವರು ಹೇಳಿದ್ದಾರೆ.

"ಪ್ರಶ್ನೆ ನ್ಯಾಯಸಮ್ಮತವಾಗಿದೆ, ಆದರೆ ಸರ್ಕಾರದ ಉತ್ತರಕ್ಕಾಗಿ ಭಾರತ ಎಷ್ಟು ಸಮಯ ಕಾಯುತ್ತದೆ? ಕೋವಿಡ್ ಲಸಿಕೆ ಲಭ್ಯತೆಯ ಕಾರ್ಯತಂತ್ರ 'ಮನ್ ಕಿ ಬಾತ್' ಆಗಿರಬೇಕು" ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಕ 'ಮನ್ ಕಿ ಬಾತ್' ಕಾರ್ಯಕ್ರಮವನ್ನು ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರಸಾರ ಮಾಡಿದ ನಂತರ ಗಾಂಧಿಯವರ ಟ್ವೀಟ್ ಬಂದಿದೆ.

ಸೇರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆಧಾರ್ ಪೂನಾವಾಲಾ ಅವರ ಟ್ವೀಟ್‌ಗೆ ಸಂಬಂಧಿಸಿದಂತೆ ಗಾಂಧಿ  ತಮ್ಮ ವರದಿಯನ್ನು ಹಂಚಿಕೊಂಡಿದ್ದು, ಮುಂದಿನ ಒಂದು ವರ್ಷದಲ್ಲಿ ದೇಶದ ಜನತೆಗೆ ಕೋವಿಡ್ ಲಸಿಕೆ ವಿತರಿಸಲು 80,000 ಕೋಟಿ ರೂ. ಇದೆಯೆ? ಎಂದು ಸರ್ಕಾರವನ್ನು ಕೇಳಿದರು.

ಪೂನಾಲಾವಾ ಶನಿವಾರ ಮಾಡಿದ್ದ ಟ್ವೀಟ್ ನಲ್ಲಿ ಭಾರತ ಸರ್ಕಾರಕ್ಕೆ ಈ ಮೇಲಿನ ಪ್ರಶ್ನೆ ಕೇಳಿದ್ದು ನಮ್ಮ ದೇಶದ ಅಗತ್ಯತೆ, ಸಂಗ್ರಹಣೆ ಮತ್ತು ವಿತರಣೆಯ ದೃಷ್ಟಿಯಿಂದ ಪೂರೈಸಲು ಯೋಜನೆ ಮತ್ತು ಮಾರ್ಗದರ್ಶನದ ಅಗತ್ಯವಿದೆ ಎಂದು ಅವರು ಹೇಳೀದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com