ಕೃಷಿ ಕಾನೂನುಗಳು ರೈತರ ಪಾಲಿಗೆ ಮರಣ ಶಾಸನ: ರಾಹುಲ್ ಗಾಂಧಿ

ವಿವಿಧ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಸಂಖ್ಯಾತ ರೈತ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿರುವ ಕೃಷಿ ಕಾನೂನುಗಳನ್ನು ಮರಣ ಶಾಸನ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆದಿದ್ದಾರೆ.
ರೈತರ ಪ್ರತಿಭಟನೆ, ರಾಹುಲ್ ಗಾಂಧಿ
ರೈತರ ಪ್ರತಿಭಟನೆ, ರಾಹುಲ್ ಗಾಂಧಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳು ಮತ್ತು ಅಸಂಖ್ಯಾತ ರೈತ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿರುವ ಕೃಷಿ ಕಾನೂನುಗಳನ್ನು ಮರಣ ಶಾಸನ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕರೆದಿದ್ದಾರೆ.

ಕೃಷಿ ಕಾನೂನುಗಳು ರೈತರ ಪಾಲಿನ ಮರಣ ಶಾಸನಗಳಾಗಿವೆ.  ಸಂಸತ್ ಹಾಗೂ ಹೊರಗಡೆ ರೈತರ ಧ್ವನಿಯನ್ನು ಕಿತ್ತುಕೊಳ್ಳಲಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಿರುವುದಕ್ಕೆ ಇದೇ ಸಾಕ್ಷಿಯಂತಿದೆ ಎಂದು ರಾಹುಲ್ ಗಾಂಧಿ  ನ್ಯೂಸ್ ಪೇಪರ್ ಕ್ಲಿಪಿಂಗ್ ಶೇರ್ ಮಾಡುವ ಮೂಲಕ ಟ್ವಿಟ್ ಮಾಡಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನಿಂದ ಅಂಗೀಕಾರಗೊಂಡಿರುವ ಕೃಷಿ ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾನುವಾರ ಅಂಕಿತ ಹಾಕುವ ಮೂಲಕ ಎಲ್ಲಾ ಮೂರು ಮಸೂದೆಗಲು ಕಾನೂನುಗಳಾಗಿ ಜಾರಿಗೆ ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com