ಕೊರೋನಾ ವಿರುದ್ಧ ಭಾರತ ದಿಟ್ಟ ಹೋರಾಟ: 11 ದಿನಗಳಲ್ಲಿ 10 ಲಕ್ಷ ಮಂದಿ ಗುಣಮುಖ

ಕೊರೋನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ಭಾರತದಲ್ಲಿ ಕೇವಲ 11 ದಿನಗಳಲ್ಲಿ ಬರೋಬ್ಬರಿ 10 ಮಂದಿ ಗುಣಮುಖರಾಗಿದ್ದು, ಇದೀಗ ದೇಶದಲ್ಲಿ 60 ಲಕ್ಷ ಮಂದಿ ಗುಣಮುಖರ ಪೈಕಿ ಕೇವಲ 10 ಲಕ್ಷ ಸಕ್ರಿಯ ಪ್ರಕರಣಗಳಷ್ಟೇ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿರುವ ಭಾರತದಲ್ಲಿ ಕೇವಲ 11 ದಿನಗಳಲ್ಲಿ ಬರೋಬ್ಬರಿ 10 ಮಂದಿ ಗುಣಮುಖರಾಗಿದ್ದು, ಇದೀಗ ದೇಶದಲ್ಲಿ 60 ಲಕ್ಷ ಮಂದಿ ಗುಣಮುಖರ ಪೈಕಿ ಕೇವಲ 10 ಲಕ್ಷ ಸಕ್ರಿಯ ಪ್ರಕರಣಗಳಷ್ಟೇ ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 

ದೇಶದಲ್ಲಿ 11 ದಿನಗಳಲ್ಲಿ 10 ಮಂದಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಈ ವರೆಗೂ ಭಾರತದಲ್ಲಿ ಒಟ್ಟು 50 ಲಕ್ಷ ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆಂದು ಸಚಿವಾಲಯ ಮಾಹಿತಿ ನೀಡಿದೆ. 

ಪ್ರತೀನಿತ್ಯ 90,000ಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಗುಣಮುಖರಾಗುತ್ತಿದ್ದು, ಸಕ್ರಿಯ ಪ್ರಕರಣಗಳಿಗಿಂತಲೂ ಚೇತರಿಕೆ ಪ್ರಮಾಣ 5 ಪಟ್ಟು ಹೆಚ್ಚಾಗಿದೆ. ವೈದ್ಯಕೀಯ ಮೂಲಸೌಕರ್ಯಗಳು ಹೆಚ್ಚಾಗಿರುವುದು, ತ್ವರಿತಗತಿ ಚಿಕಿ್ತಸೆ, ವೈದ್ಯರು, ಅರೆವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಸಮರ್ಪಣೆ ಹಾಗೂ ಬದ್ಥತೆಗಳಿಂದಾಗಿ ಇಂತಹ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com