ಕೊವಿಡ್-19: ಭಾರತದಲ್ಲಿ ಕಳೆದೊಂದು ತಿಂಗಳಿಂದ ಚೇತರಿಕೆ ಪ್ರಮಾಣ ಶೇ.100ರಷ್ಟು ಹೆಚ್ಚಳ!

ಭಾರತದಲ್ಲಿ ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಕೊರೋನಾ ವೈರಸ್ ಅಬ್ಬರ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.100ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್
ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್

ನವದೆಹಲಿ: ಭಾರತದಲ್ಲಿ ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ಉಳಿದ ರಾಜ್ಯಗಳಲ್ಲಿ ಕೊರೋನಾ ವೈರಸ್ ಅಬ್ಬರ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕಳೆದೊಂದು ತಿಂಗಳಿನಿಂದ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.100ರಷ್ಟಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತ ದೇಶ ಮಾರಕ ಕೊರೋನಾ ವೈರಸ್ ನ ಹೆಡೆ ಮುರಿ ಕಟ್ಟುತ್ತಿದೆಯೇ.. ಇಂತಹುದೊಂದು ಪ್ರಶ್ನೆಗೆ ತಜ್ಞರು ಹೌದು ಎಂದು ಉತ್ತರಿಸುತ್ತಿದ್ದು, ಇದಕ್ಕೆ ಕಾರಣ ದೇಶದಲ್ಲಿನ ಇತ್ತಿಚಿನ ದಿನಗಳ ಚೇತರಿಕೆ ಪ್ರಮಾಣ. ಹೌದು.. ಕಳೆದ ಕೆಲವಾರಗಳಿಂದ ದೇಶದಲ್ಲಿ ಹೊಸ ಸೋಂಕಿತರ ಪ್ರಮಾಣಕ್ಕಿಂತ ಚೇತರಿಸಿಕೊಂಡವರ ಪ್ರಮಾಣವೇ ಅಧಿಕವಾಗಿದ್ದು, ಇದು ದೇಶದಲ್ಲಿನ ಒಟ್ಟಾರೆ ಚೇತರಿಕೆ ಪ್ರಮಾಣವನ್ನು ಏರಿಕೆ ಮಾಡಿದೆ. ಕಳೆದೊಂದು ತಿಂಗಳಿನ ದತ್ತಾಂಶವನ್ನು ಕೂಲಂಕುಷವಾಗಿ ಪರಿಶೀಲಿಸಿದರೆ ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.100ಕ್ಕೂ ಅಧಿಕವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ದೇಶದಲ್ಲಿನ ಒಟ್ಟಾರೆ ಸೋಂಕಿತರ ಪೈಕಿ ಶೇ.83.01ರಷ್ಟು ಮಂದಿ ಸೋಂಕಿತರು ಗುಣಮುಖರಾಗಿದ್ದು, ಕಳೆದೊಂದು ತಿಂಗಳ ದತ್ತಾಂಶವನ್ನು ಮಾತ್ರ ವಿಶ್ಲೇಷಣೆ ಮಾಡಿದರೆ ಈ ಪ್ರಮಾಣ ಶೇ.100ರನ್ನೂ ಮೀರುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10ಲಕ್ಷಕ್ಕಿಂತ ಕಡಿಮೆ ಇದ್ದು, ಜನಸಂಖ್ಯಾ ಗಾತ್ರದ ಮೇಲೆ ವಿಶ್ಲೇಷಣೆ ಮಾಡಿ ನೋಡಿದರೆ ದೇಶದಲ್ಲಿನ ಚೇತರಿಕೆ ಪ್ರಮಾಣ ಜಗತ್ತಿನ ಇತರೆ ಯಾವುದೇ ದೇಶಗಳಿಗಿಂತಲೂ ಹೆಚ್ಚಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com