ಬಿಹಾರ ಚುನಾವಣೆ ಹೊತ್ತಲ್ಲಿ ಬಿಜೆಪಿಯ ಬಗ್ಗೆ ಮತ್ತೊಂದು ಮಿತ್ರಪಕ್ಷಕ್ಕೆ ಅಸಮಾಧಾನ?

ಬಿಹಾರ ವಿಧಾನಸಭಾ ಚುನಾವಣೆ ಸನಿಹದಲ್ಲಿದ್ದು, ಬಿಹಾರದಲ್ಲಿ ಎನ್ ಡಿಎ ಮಿತ್ರಪಕ್ಷ ಎಲ್ ಜೆಪಿ ಅಸಮಾಧಾನಗೊಂಡಿದೆ. 
ಬಿಹಾರ ಚುನಾವಣೆ ಹೊತ್ತಲ್ಲಿ ಬಿಜೆಪಿಯ ಬಗ್ಗೆ ಮತ್ತೊಂದು ಮಿತ್ರಪಕ್ಷಕ್ಕೆ ಅಸಮಾಧಾನ?
ಬಿಹಾರ ಚುನಾವಣೆ ಹೊತ್ತಲ್ಲಿ ಬಿಜೆಪಿಯ ಬಗ್ಗೆ ಮತ್ತೊಂದು ಮಿತ್ರಪಕ್ಷಕ್ಕೆ ಅಸಮಾಧಾನ?

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಸನಿಹದಲ್ಲಿದ್ದು, ಬಿಹಾರದಲ್ಲಿ ಎನ್ ಡಿಎ ಮಿತ್ರಪಕ್ಷ ಎಲ್ ಜೆಪಿ ಅಸಮಾಧಾನಗೊಂಡಿದೆ. 

ಚುನಾಣೆಗೆ ಸ್ಪರ್ಧಿಸುವ ಸ್ಥಾನ ಹಂಚಿಕೆ ಕುರಿತಾಗಿ ಎಲ್ ಜೆಪಿ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಜೊತೆ ಸ್ಪರ್ಧಿಸುವುದೋ ಅಥವಾ ಏಕಾಂಗಿಯಾಗಿ ಸ್ಪರ್ಧಿಸುವುದೋ ಎಂದು ಎಲ್ ಜೆ ಪಿ ಚಿಂತನೆ ನಡೆಸುತ್ತಿದೆ. 

243 ಸ್ಥಾನಗಳ ಬಿಹಾರ ವಿಧಾನಸಭ ಕ್ಷೇತ್ರಗಳ ಪೈಕಿ 143 ಸ್ಥಾನಗಳಲ್ಲಿ ಸ್ಪರ್ಧಿಸಲು ಎಲ್ ಜೆಪಿ ಸ್ಪರ್ಧಿಸಲು ಬೇಡಿಕೆ ಮುಂದಿಟ್ಟಿದೆ. ಎಲ್ ಜೆಪಿಗೆ 27 ಸ್ಥಾನಗಳನ್ನಷ್ಟೇ ನೀಡಲು ಬಿಜೆಪಿ ಆಸಕ್ತಿ ಹೊಂದಿದೆ. 

2015 ರಲ್ಲಿ ಎಲ್ ಜೆಪಿ 42 ಸ್ಥಾನಗಳಲ್ಲಿ ಸ್ಪರ್ಧಿಸಿ 2 ಸ್ಥಾನಗಳನ್ನಷ್ಟೇ ಗೆದ್ದಿತ್ತು. ಈಗ ಎಲ್ ಜೆಪಿಯ ಒಂದು ಬಣದ ನಾಯಕರು ಎನ್ ಡಿಎ ಜೊತೆ ಕಡಿಮೆ ಸ್ಥಾನದಲ್ಲಿ ಸ್ಪರ್ಧಿಸುವುದಕ್ಕೆ ನಿರಾಕರಿಸಿದ್ದಾರೆಂದು ಹೇಳಲಾಗಿದೆ. ಈ ನಡುವೆ ಎಲ್ ಜೆಪಿ ನಾಯಕ, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಆಸ್ಪತ್ರೆಗೆ ದಾಖಲಾಗಿದ್ದು ನಿರ್ಧಾರ ಕೈಗೊಳ್ಳುವುದು ಇನ್ನಷ್ಟು ವಿಳಂಬವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com