ಹತ್ರಾಸ್ ಯುವತಿ ಮೇಲೆ ಮೃಗೀಯ ಅತ್ಯಾಚಾರ, ಇಡೀ ವ್ಯವಸ್ಥೆಯಿಂದಲೂ ಆಕೆಯ ಮೇಲೆ ದೌರ್ಜನ್ಯ: ಕೇಜ್ರಿವಾಲ್ 

ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಮೃಗೀಯ ಅತ್ಯಾಚಾರ ನಡೆದಿರುವುದಷ್ಟೇ ಅಲ್ಲ, ನಮ್ಮ ಇಡೀ ವ್ಯವಸ್ಥೆ ಆಕೆಯ ಮೇಲೆ ಹಲ್ಲೆ ನಡೆಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. 

Published: 30th September 2020 01:45 PM  |   Last Updated: 30th September 2020 01:45 PM   |  A+A-


kejriwal-2

ಕೇಜ್ರಿವಾಲ್

Posted By : Srinivas Rao BV
Source : The New Indian Express

ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿ ಮೇಲೆ ಮೃಗೀಯ ಅತ್ಯಾಚಾರ ನಡೆದಿರುವುದಷ್ಟೇ ಅಲ್ಲ, ನಮ್ಮ ಇಡೀ ವ್ಯವಸ್ಥೆ ಆಕೆಯ ಮೇಲೆ ಹಲ್ಲೆ ನಡೆಸಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. 

ಪೊಲೀಸರು ನಮಗೆ ಯುವತಿಯ ಅಂತ್ಯ ಸಂಸ್ಕಾರ ಮಾಡುವುದಕ್ಕೂ ಬಿಡಲಿಲ್ಲ ಎಂಬ ಸಂತ್ರಸ್ತ ಯುವತಿಯ ಕುಟುಂಬ ಸದಸ್ಯರ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್, ಹತ್ರಾಸ್ ಯುವತಿಯನ್ನು ಮೊದಲು ಒಂದಷ್ಟು ಮೃಗೀಯ ವರ್ತನೆಯುಳ್ಳವರು ಅತ್ಯಾಚಾರ ಮಾಡಿದರು, ಆ ನಂತರ ಇಡೀ ವ್ಯವಸ್ಥೆಯೂ ಆಕೆಯನ್ನು ರೇಪ್ ಮಾಡಿದೆ ಎಂದಿದ್ದಾರೆ.

ಗಂಭೀರ ಗಾಯಗಳಿಂದ ದೆಹಲಿಯ ಸಫ್ದಾರ್​ ಜಂಗ್​ ಆಸ್ಪತ್ರೆಗೆ ದಾಖಲಾಗಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಮೃತಪಟ್ಟಿದ್ದರು. ಯುವತಿಯ ಮೃತದೇಹಕ್ಕೆ ಸೆ.30 ರಂದು ಮುಂಜಾನೆ ಅಂತ್ಯಸಂಸ್ಕಾರ ಮಾಡಲಾಗಿದೆ. 

ಕುಟುಂಬ ಸದಸ್ಯರ ಇಚ್ಛೆಯಂತೆ ಮೃತ ಯುವತಿಗೆ ದಹನ ಕ್ರಿಯೆಗಳ ಮೂಲಕ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಕೇಜ್ರಿವಾಲ್ ಇಡೀಯ ಪ್ರಕರಣ ಅತ್ಯಂತ ನೋವುಂಟು ಮಾಡಿದೆ ಎಂದು ಬರೆದಿದ್ದಾರೆ. 

ಇದಕ್ಕೂ ಮುನ್ನ ಈ ಘಟನೆಯನ್ನು ಇಡೀ ಸಮಾಜ ನಾಚಿಕೆಪಟ್ಟುಕೊಳ್ಳಬೇಕಾದ್ದು, ಅಪರಾಧಿಗಳಿಗೆ ಮರಣದಂಡನೆ ವಿಧಿಸಬೇಕೆಂದು ಎಂದು ಕೇಜ್ರಿವಾಲ್ ಹೇಳಿದ್ದರು. 

Stay up to date on all the latest ರಾಷ್ಟ್ರೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp