'ಚಂದಮಾಮ' ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದ ಕೆಸಿ ಶಿವಶಂಕರ್ ನಿಧನ

ಒಂದೆರಡು ಪೀಳಿಗೆಯ ಹಿಂದಿನವರಿಗೆ ಮನರಂಜನೆಯ ಆಧಾರವಾಗಿರುತ್ತಿದ್ದ ಚಂದಮಾಮ ಕಥೆಗಳಲ್ಲಿ ಬರುವ ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದ ಕೆ.ಸಿ ಶಿವಶಂಕರ್ (97) ಸೆ.30 ರಂದು ಇಹಲೋಕ ತ್ಯಜಿಸಿದ್ದಾರೆ. 

Published: 30th September 2020 02:37 PM  |   Last Updated: 30th September 2020 03:16 PM   |  A+A-


KC Sivasankar

ಕೆಸಿ ಶಿವಶಂಕರ್

Posted By : Srinivas Rao BV
Source : The New Indian Express

ಚೆನ್ನೈ: ಒಂದೆರಡು ಪೀಳಿಗೆಯ ಹಿಂದಿನವರಿಗೆ ಮನರಂಜನೆಯ ಆಧಾರವಾಗಿರುತ್ತಿದ್ದ ಚಂದಮಾಮ ಕಥೆಗಳಲ್ಲಿ ಬರುವ ಪಾತ್ರಗಳಿಗೆ ಜೀವ ತುಂಬಿದ್ದ ಕಲಾವಿದ ಕೆ.ಸಿ ಶಿವಶಂಕರ್ (97) ಸೆ.30 ರಂದು ಇಹಲೋಕ ತ್ಯಜಿಸಿದ್ದಾರೆ. 

ಚೆನ್ನೈ ನ ನಾಗಿ ರೆಡ್ಡಿ ಅವರು ಪ್ರಾರಂಭಿಸಿದ್ದ ಚಂದಮಾಮ ಅಥವಾ ಅಂಬುಲಿಮಾಮ ನಿಯತಕಾಲಿಕೆಗಳಲ್ಲಿ ಶಿವಶಂಕರ್ ಬರೊಬ್ಬರಿ 60 ವರ್ಷಗಳ ಕಾಲ ಕೆಲಸ ಮಾಡಿದ ಕೀರ್ತಿ ಹೊಂದಿದ್ದಾರೆ. 

ಪ್ರಾರಂಭದಲ್ಲಿ ಮೂರು ಭಾಷೆಗಳಲ್ಲಿದ್ದ ಚಂದಮಾಮ ಕೆಲವೇ ಸಮಯದಲ್ಲಿ 12 ಭಾಷಗೆಳಲ್ಲಿ ಪ್ರಕಟಗೊಂಡ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. 

ತಮಿಳುನಾಡಿನ ಈ ರೋಡ್ ನ ಸಣ್ಣ ಗ್ರಾಮವೊಂದರಲ್ಲಿ ಹುಟ್ಟಿದ್ದ ಶಿವಶಂಕರ್, ತಮ್ಮ 10 ನೇ ವಯಸ್ಸಿನಲ್ಲಿ ಕಿರಿಯ ಸಹೋದರನೊಂದಿಗೆ ನಗರ ಪ್ರದೇಶಕ್ಕೆ ಬಂದು ಕಾರ್ಪೊರೇಷನ್ ಶಾಲೆಗೆ ಸೇರ್ಪಡೆಗೊಂಡು ವ್ಯಾಸಂಗ ಮುಂದುವರೆಸಿದ್ದರು. 

ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಶಿಕ್ಷಕರು, ಗುರುಗಳ ಸಲಹೆ ಮೇರೆಗೆ ಸರ್ಕಾರಿ ಕಲಾ ಕಾಲೇಜಿನಲ್ಲಿ ವ್ಯಾಸಂಗ ಮುಂದುವರೆಸಿ ಚಿತ್ರಕಲಾ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು. 

1946 ರಲ್ಲಿ ಪದವಿ ಪಡೆದ ಶಿವಶಂಕರ್, ಹಿರಿಯ ಸಹಪಾಠಿ ಕಲೈ ಮಗಳ್ ನಿಯತಕಾಲಿಕೆಯಲ್ಲಿ ಉದ್ಯೋಗಕ್ಕೆ ಸೇರುವಂತೆ ಸಲಹೆ ನೀಡಿದ್ದರು ಹಾಗೂ ಅಲ್ಲಿಯೇ 5 ವರ್ಷಗಳು ಸೇವೆ ಸಲ್ಲಿಸಿದ ಬಳಿಕ 1951 ರಲ್ಲಿ ನಾಗಿ ರೆಡ್ಡಿ ಅವರ ಅಂಬುಲಿ ಮಾಮ ನಿಯತಕಾಲಿಕೆಯನ್ನು ಸೇರಿದ್ದರು. ಅಲ್ಲಿಂದ ಹಿಂತಿರುಗಿ ನೋಡದ ಶಿವಶಂಕರ್, ಚಂದಮಾಮ ಕಥೆಗಳ ಪಾತ್ರಗಳ ಚಿತ್ರಗಳಿಗೆ ಜೀವ ತುಂಬಿ ತಮ್ಮದೇ ಛಾಪು ಮೂಡಿಸಿ ಖ್ಯಾತಿ ಪಡೆದಿದ್ದರು. 

Stay up to date on all the latest ರಾಷ್ಟ್ರೀಯ news
Poll
Marraige

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 18 ರಿಂದ ಹೆಚ್ಚಿಸಬೇಕೆ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp