ಅನ್‌ಲಾಕ್ 5 ಮಾರ್ಗಸೂಚಿ ಪ್ರಕಟ: ಚಿತ್ರಮಂದಿರ, ಈಜುಕೊಳಗಳನ್ನು ತೆರೆಯಲು ಗ್ರೀನ್ ಸಿಗ್ನಲ್
ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ ಪಾರ್ಕ್ ಗಳೂ ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರ್ ಕಾರ್ಯಾರಂಭ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
Published: 30th September 2020 08:54 PM | Last Updated: 30th September 2020 08:54 PM | A+A A-

ನವದೆಹಲಿ: ಅಕ್ಟೋಬರ್ 15 ರಿಂದ ಸಿನೆಮಾ ಹಾಲ್‌ಗಳು, ಮಲ್ಟಿಪ್ಲೆಕ್ಸ್‌ಗಳು, ಎಕ್ಸಿಬಿಷನ್ ಹಾಲ್‌ಗಳು ಮತ್ತು ಮನರಂಜನಾ ಪಾರ್ಕ್ ಗಳೂ ತಮ್ಮ ಆಸನ ಸಾಮರ್ಥ್ಯದ ಶೇಕಡಾ 50 ರಷ್ಟನ್ನು ಮಾತ್ರ ಭರ್ತಿ ಮಾಡುವ ನಿಯಮ ಪಾಲನೆ ಮಾಡುವುದರೊಂದಿಗೆ ಪುನರ್ ಕಾರ್ಯಾರಂಭ ಮಾಡಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಸರ್ಕಾರ ಇಂದು ಅನ್‌ಲಾಕ್ 5 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅನ್‌ಲಾಕ್ 5 ರ ಮಾರ್ಗಸೂಚಿಗಳ ಅನುಸಾರ ಅಕ್ಟೋಬರ್ 15 ರಿಂದ ಶಾಲೆ, ಕಾಲೇಜುಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುವುದು ಎಂದು ಹೇಳಿದೆ. ಆದರೆ ಅಂತಿಮ ನಿರ್ಧಾರವನ್ನು ಆಯಾ ರಾಜ್ಯಗಳು ಮತ್ತು ಆಯಾ ಸಂಸ್ಥೆಗಳಿಗೆ ಬಿಡಲಾಗಿದೆ
ಮಾರ್ಗಸೂಚಿಗಳ ಪ್ರಕಾರ, ಕ್ರೀಡಾಪಟುಗಳ ತರಬೇತಿಗಾಗಿ ಬಳಸಲಾಗುವ ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಲಾಗುವುದು, ಇದಕ್ಕಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯವು ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಹೊರಡಿಸುತ್ತದೆ.