ಅವಾಚ್ಯ ಶಬ್ದಗಳಿಂದ ಮಹಿಳೆಯರ ನಿಂದನೆ: ಯೂಟ್ಯೂಬ್ ಸ್ಟಾರ್ ಬಂಧನ

ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ 33 ವರ್ಷದ ಯೂ ಟ್ಯೂಬಾ ಸ್ಟಾರ್ ನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ

ಮುಂಬಯಿ: ಮಹಿಳೆಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ 33 ವರ್ಷದ ಯೂ ಟ್ಯೂಬಾ ಸ್ಟಾರ್ ನನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ.

ಫರೀದಾಬಾದ್ ನಿವಾಸಿ ಸಾಹಿಲ್ ಅಲಿಯಾಸ್ ಪ್ರದೀಪ್ ಚೌಧರಿಯನ್ನು ಮುಂಬಯಿ ಸೈಬರ್ ಸೆಲ್ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಸಾವಿರಾರು ಸಬ್ ಸ್ಕ್ರೈಬರ್ ಗಳನ್ನು ಹೊಂದಿರುವ ಚೌಧರಿ ಯೂಟ್ಯೂಬ್ ಚಾನೆಲ್, ಇತ್ತೀಚೆಗೆ ಸಾವನ್ನಪ್ಪಿದ ಸುಶಾಂತ್ ಸಿಂಗ್ ಮತ್ತು ಬಾಲಿವುಡ್ ಡ್ರಗ್ ಪ್ರಕರಣಗಳ ಬಗ್ಗೆ ವಿಡಿಯೋ ಹರಿ ಬಿಟ್ಟಿತ್ತು.

ಸಾಹಿಲ್ ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಆತ ಮಹಿಳೆಯರನ್ನು ನಿಂದಿಸಿದ್ದಾನೆ ಎಂದು ಆರೋಪಿಸಿ ಆಗಸ್ಟ್ 22 ರಂದು ಸೈಬರ್ ಸೆಲ್ ಗೆ ಮಹಿಳೆಯೊಬ್ಬರು ದೂರು ನೀಡಿದ್ದರು.

ಚೌಧರಿ ಅವರು ಪತ್ರಕರ್ತ ಎಂದು ಹೇಳಿಕೊಂಡರು, ಆದರೆ ಈ ಹೇಳಿಕೆ ಸುಳ್ಳು ಎಂದು ತಿಳಿದು ಬಂದಿದೆ, ಗುರುವಾರದವರೆಗೂ ಆತನನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com