ಓರ್ವ ಕೋವಿಡ್-19 ಸೋಂಕಿತ 400 ಮಂದಿಗೆ ವೈರಾಣು ಹರಡಬಲ್ಲ!

ಓರ್ವ ಕೋವಿಡ್-19 ಸೋಂಕಿತ ವ್ಯಕ್ತಿ 400 ಮಂದಿಗೆ ವೈರಾಣುವನ್ನು ಹರಡಬಲ್ಲ ಎಂದು ಮಹಾರಾಷ್ಟ್ರದ ಕೋವಿಡ್-19 ಟಾಸ್ಕ್ ಫೋತ್ಸ್ ನ ಡಾ.ಸಂಜಯ್ ಓಕ್ ಹೇಳಿದ್ದಾರೆ. 

Published: 02nd April 2021 03:30 AM  |   Last Updated: 02nd April 2021 01:02 PM   |  A+A-


Covid-19 Pandemic

ಕೋವಿಡ್-19 ಸೋಂಕು

Posted By : Srinivas Rao BV
Source : Online Desk

ಓರ್ವ ಕೋವಿಡ್-19 ಸೋಂಕಿತ ವ್ಯಕ್ತಿ 400 ಮಂದಿಗೆ ವೈರಾಣುವನ್ನು ಹರಡಬಲ್ಲ ಎಂದು ಮಹಾರಾಷ್ಟ್ರದ ಕೋವಿಡ್-19 ಟಾಸ್ಕ್ ಫೋತ್ಸ್ ನ ಡಾ.ಸಂಜಯ್ ಓಕ್ ಹೇಳಿದ್ದಾರೆ. 

ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದನ್ನು ಬಿಟ್ಟರೆ ಬೇರೆ ಮಾರ್ಗಗಳಿಲ್ಲ ಎಂದು ಓಕ್ ಅಭಿಪ್ರಾಯಪಟ್ಟಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ಸಾಮಾನ್ಯ ಶೀತ, ಸಣ್ಣ ಪ್ರಮಾಣದ ಮೈಕೈ ನೋವು, ಹಾಗೂ ಆಯಾಸಗಳು ಕೋವಿಡ್-19 ರೋಗಿಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ರೋಗ ಲಕ್ಷಣವಾಗಿದೆ ಎಂದು ಓಕ್ ಮಾಹಿತಿ ನೀಡಿದ್ದಾರೆ.

ಕೊರೋನಾ ಸಾಮಾನ್ಯವಾಗಿ ಮೂಗಿನ ಮೂಲಕ ಹರಡುತ್ತದೆ. ಓರ್ವ ಕೊರೋನಾ ಸೋಂಕಿತ ಕನಿಷ್ಟ 400 ಮಂದಿಗೆ ಸೋಂಕನ್ನು ಹರಡಬಲ್ಲ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದಷ್ಟೇ ಇದಕ್ಕೆ ಇರುವ ಪರಿಹಾರ ಎನ್ನುತ್ತಾರೆ ಡಾ.ಸಂಜಯ್ ಓಕ್.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp