ಮರಾಠರು ‘ಆಕ್ರಮಣಕಾರರು’ ಎಂದು ಟ್ವೀಟ್ ಮಾಡಿ ನಂತರ ಕ್ಷಮೆಯಾಚಿಸಿದ ಗೋವಾ ಪ್ರವಾಸೋದ್ಯಮ ಇಲಾಖೆ

ಛತ್ರಪತಿ ಶಿವಾಜಿ ಮಹಾರಾಜ್ ನೇತೃತ್ವದ ಮರಾಠ ಯೋಧರು ‘ಆಕ್ರಮಣಕಾರರು’ ಎಂದು ಶುಕ್ರವಾರ ವಿವಾದಾತ್ಮಕ ಟ್ವೀಟ್‌ ಮಾಡಿದ್ದ ಗೋವಾ ಪ್ರವಾಸೋದ್ಯಮ ಇಲಾಖೆ, ನಂತರ ಆ ಟ್ವೀಟ್‌ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದೆ.

Published: 02nd April 2021 03:09 PM  |   Last Updated: 02nd April 2021 03:09 PM   |  A+A-


marathas

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ಪಣಜಿ: ಛತ್ರಪತಿ ಶಿವಾಜಿ ಮಹಾರಾಜ್ ನೇತೃತ್ವದ ಮರಾಠ ಯೋಧರು ‘ಆಕ್ರಮಣಕಾರರು’ ಎಂದು ಶುಕ್ರವಾರ ವಿವಾದಾತ್ಮಕ ಟ್ವೀಟ್‌ ಮಾಡಿದ್ದ ಗೋವಾ ಪ್ರವಾಸೋದ್ಯಮ ಇಲಾಖೆ, ನಂತರ ಆ ಟ್ವೀಟ್‌ ಅನ್ನು ಡಿಲೀಟ್ ಮಾಡಿ ಕ್ಷಮೆಯಾಚಿಸಿದೆ.

ಈ ಟ್ವೀಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷ ಕಾಂಗ್ರೆಸ್, ‘ಬಿಜೆಪಿ ಸರ್ಕಾರ ಮರಾಠರಿಗೆ ಅವಮಾನ ಮಾಡಿದೆ’ ಎಂದು ಆರೋಪಿಸಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಗೋವಾ ಪ್ರವಾಸೋದ್ಯಮ ಸಚಿವ ಮನೋಹರ್ ಜಜ್ಗಾಂವ್ಕರ್ ಅವರು, ‘ ಇಲಾಖೆಯ ಟ್ವೀಟ್‌ ಬಗ್ಗೆ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.

ಗೋವಾ ಪ್ರವಾಸೋದ್ಯಮ ಇಲಾಖೆ ತನ್ನ ಅಧಿಕೃತ ಟ್ವೀಟರ್ ಖಾತೆ TourismGoaದಲ್ಲಿ ‘ಅಗುವಾಡಾ ಜೈಲು, ಅಗುವಾಡಾ ಕೋಟೆಯ ಸುಂದರ ಭಾಗವಾಗಿದೆ. ಇದನ್ನು 1612ರಲ್ಲಿ ನಿರ್ಮಿಸಲಾಗಿದೆ. ಪೋರ್ಚುಗೀಸರ ಹಿಡಿತವಿದ್ದ ಈ ಕೋಟೆ ಮೇಲೆ ಡಚ್ಚರು ಮತ್ತು ಮರಾಠರು ಆಕ್ರಮಣ ಮಾಡಿದ್ದರು’ ಎಂದು ಟ್ವೀಟ್‌ ಮಾಡಿತ್ತು.

ಈ ಟ್ವೀಟ್‌ ಅನ್ನು ತಕ್ಷಣವೇ ಡಿಲೀಟ್ ಮಾಡಿದ ಇಲಾಖೆ, ‘ಟ್ವೀಟ್‌ನಲ್ಲಿ ಡಚ್ಚರನ್ನು ಆಕ್ರಮಣಕಾರರು ಎಂದು ಕರೆಯಲಾಗಿದೆ. ಮರಾಠ ಯೋಧರನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ನಮ್ಮಿಂದ ತಪ್ಪಾಗಿದೆ. ಕ್ಷಮಿಸಿ’ ಎಂದು ಮತ್ತೊಂದು ಟ್ವೀಟ್‌ ಮಾಡಿದೆ.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp