ಈಶಾನ್ಯ ಲಡಾಖ್ ನಲ್ಲಿ ತ್ವರಿತಗತಿಯ ಸೇನಾ ಹಿಂತೆಗೆತಕ್ಕೆ ಚೀನಾಗೆ ಭಾರತದ ಒತ್ತಾಯ!

ಗಡಿ ಘರ್ಷಣೆ ನಡೆದಿದ್ದ ಈಶಾನ್ಯ ಲಡಾಖ್ ನಲ್ಲಿ ಬಾಕಿ ಉಳಿದಿರುವ ಪ್ರದೇಶಗಳಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಚೀನಾ ತ್ವರಿತಗೊಳಿಸಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ. 

Published: 02nd April 2021 10:23 PM  |   Last Updated: 02nd April 2021 10:23 PM   |  A+A-


Visual of Indian and Chinese flag used for representational purposes. (File | AFP)

ಈಶಾನ್ಯ ಲಡಾಖ್ ನಲ್ಲಿ ತ್ವರಿತಗತಿಯ ಸೇನಾ ಹಿಂತೆಗೆತಕ್ಕೆ ಚೀನಾಗೆ ಭಾರತದ ಒತ್ತಾಯ!

Posted By : Srinivas Rao BV
Source : The New Indian Express

ನವದೆಹಲಿ: ಗಡಿ ಘರ್ಷಣೆ ನಡೆದಿದ್ದ ಈಶಾನ್ಯ ಲಡಾಖ್ ನಲ್ಲಿ ಬಾಕಿ ಉಳಿದಿರುವ ಪ್ರದೇಶಗಳಲ್ಲಿ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಚೀನಾ ತ್ವರಿತಗೊಳಿಸಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ. 

ತ್ವರಿತಗತಿಯ ಸೇನಾ ಹಿಂತೆಗೆತದಿಂದ ಗಡಿ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗಲಿದ್ದು, ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳುವುದಕ್ಕೆ ಸಹಕಾರಿಯಾಗಲಿದೆ, ಸೇನಾ ಹಿಂತೆಗೆತದ ವಿಷಯವಾಗಿ ಉಭಯ ರಾಷ್ಟ್ರಗಳೂ ಸೇನೆ ಹಾಗೂ ರಾಜತಾಂತ್ರಿಕ ವಾಹಿನಗಳ ಮೂಲಕ ಸಂಪರ್ಕದಲ್ಲಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಂ ಬಾಗ್ಚಿ ಹೇಳಿದ್ದಾರೆ. 

ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ಎಳೆಯುವುದರಲ್ಲಿ ಎರಡೂ ರಾಷ್ಟ್ರಗಳು ಆಸಕ್ತಿ ಹೊಂದಿಲ್ಲ ಎಂಬ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ ಜೈಶಂಕರ್ ಅವರ ಹೇಳಿಕೆಯನ್ನು ಅರಿಂದಂ ಬಾಗ್ಚಿ ಹೇಳಿದ್ದಾರೆ.

"ಈ ಹಿನ್ನೆಲೆಯಲ್ಲಿ ಚೀನಾ ಉಳಿದ ಪ್ರದೇಶಗಳಲ್ಲಿ ಸೇನಾ ಹಿಂತೆಗೆತವನ್ನು ತ್ವರಿತಗೊಳಿಸುವ ವಿಶ್ವಾಸವಿದೆ" ಎಂದು ಅರಿಂದಂ ಬಾಗ್ಚಿ ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp