ನನ್ನನ್ನು ಗೆಲ್ಲಿಸಿ, 2022ರ ವಿಶ್ವಕಪ್ ಫುಟ್ಬಾಲ್ ಟಿಕೆಟ್ ಪಡೆಯಿರಿ: ಕೇರಳ ಅಭ್ಯರ್ಥಿ ಆಶ್ವಾಸನೆ
ಗೆಲ್ಲಲು ನನಗೆ ಸಹಾಯ ಮಾಡಿ, 2022 ಕತಾರ್ ಫಿಫಾ ವಿಶ್ವಕಪ್ಗೆ ಟಿಕೆಟ್ ಪಡೆಯಿರಿ’ ಇದು ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರ ಪ್ರಣಾಳಿಕೆಯಾಗಿದೆ.
Published: 02nd April 2021 02:27 PM | Last Updated: 02nd April 2021 03:58 PM | A+A A-

ಸುಲೈಮಾನ್ ಹಾಜಿ
ಮಲ್ಲಪುರಂ: ಗೆಲ್ಲಲು ನನಗೆ ಸಹಾಯ ಮಾಡಿ, 2022 ಕತಾರ್ ಫಿಫಾ ವಿಶ್ವಕಪ್ಗೆ ಟಿಕೆಟ್ ಪಡೆಯಿರಿ’ ಇದು ಕೇರಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರ ಪ್ರಣಾಳಿಕೆಯಾಗಿದೆ.
ಕೇರಳದ ಕುಂಡೊಟ್ಟಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಎಡಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಕಟ್ಟಪ್ಪುರುತಿ ಸುಲೈಮಾನ್ ಹಾಜಿ ಕೇರಳದಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿದೆ. ಯುವಕರನ್ನು ಸೆಳೆಯುವ ಉದ್ದೇಶದಿಂದ ಸುಲೈಮಾನ್ ಹಾಜಿ ಈ ಭರವಸೆ ನೀಡಿದ್ದಾರೆ
“ಒಂದು ವೇಳೆ ನಾನು ಗೆದ್ದರೇ, ‘ಶಾಸಕ ಟ್ರೋಫಿ’ ಪಂದ್ಯಾವಳಿಯನ್ನು ನಡೆಸುತ್ತೇನೆ. ಈ ಪಂದ್ಯಾವಳಿಯಲ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ಆರು ಪಂಚಾಯಿತಿಗಳು ಮತ್ತು ಒಂದು ಪುರಸಭೆಯಲ್ಲಿನ ಫುಟ್ಬಾಲ್ ಕ್ಲಬ್ಗಳಿಗೆ ಭಾಗವಹಿಸುವ ಅವಕಾಶವಿರುತ್ತದೆ. ವಿಜೇತ 11 ಸದಸ್ಯರ ತಂಡವು 2022 ರ ಫಿಫಾ ವಿಶ್ವಕಪ್ನಲ್ಲಿ ಕತಾರ್ಗೆ ತೆರಳಲು ಮತ್ತು ಪಂದ್ಯವನ್ನು ವೀಕ್ಷಿಸಲು ಅವಕಾಶವನ್ನು ಪಡೆಯಲಿದೆ” ಎಂದು ಅವರು ಹೇಳಿದ್ದಾರೆ.
ಪ್ರವಾಸದ ಎಲ್ಲಾ ವೆಚ್ಚವನ್ನು ಭರಿಸುವುದಾಗಿ ಸುಲೈಮಾನ್ ಹಾಜಿ ಹೇಳಿದ್ದಾರೆ. ಅವರು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ, ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಕ್ಷೇತ್ರದಲ್ಲಿ ಮಿನಿ ಸಿವಿಲ್ ಸ್ಟೇಷನ್ ಸ್ಥಾಪಿಸುವುದಾಗಿ ಭರವಸೆ ನೀಡಿದ್ದಾರೆ.
ತರಕಾರಿ ಮಾರುಕಟ್ಟೆ, ಹೈಟೆಕ್ ಆಸ್ಪತ್ರೆಗಳು, ಕ್ಯಾನ್ಸರ್ ಮತ್ತು ಡಯಾಲಿಸಿಸ್ ಕೇಂದ್ರಗಳು, ಕ್ರೀಡಾಂಗಣಗಳು ಮತ್ತು ಮಕ್ಕಳ ಉದ್ಯಾನವನಗಳನ್ನು ನಿರ್ಮಿಸುವುದಾಗಿ ಅವರು ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. “ನಾನು ಕೊಂಡೊಟ್ಟಿಯ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇನೆ. ರಸ್ತೆ ಸ್ಥಿತಿ ಮತ್ತು ಕುಡಿಯುವ ನೀರಿನ ಲಭ್ಯತೆಯಂತಹ
ಸಮಸ್ಯೆಗಳನ್ನು ಸಹ ಪರಿಹರಿಸಲಾಗುವುದು ”ಎಂದು ಅವರು ತಿಳಿಸಿದ್ದಾರೆ.