ಪುಣೆಯಲ್ಲಿ ನಾಳೆಯಿಂದ ಒಂದು ವಾರ 12 ತಾಸುಗಳ ನೈಟ್ ಕರ್ಫ್ಯೂ ಜಾರಿ!

ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ನಾಳೆಯಿಂದ ಒಂದು ವಾರಗಳ ಕಾಲ 12 ಗಂಟೆಗಳ ಕರ್ಫ್ಯೂವನ್ನು ಜಾರಿಗೊಳಿಸಿ ಪುಣೆ ಮಹಾನಗರ ಪಾಲಿಕೆ ಇಂದು ಆದೇಶ ಹೊರಡಿಸಿದೆ.

Published: 02nd April 2021 02:39 PM  |   Last Updated: 02nd April 2021 04:00 PM   |  A+A-


Covid-19_Casual_Photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : PTI

ಪುಣೆ:  ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವುದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ನಾಳೆಯಿಂದ ಒಂದು ವಾರಗಳ ಕಾಲ 12 ಗಂಟೆಗಳ ಕರ್ಫ್ಯೂವನ್ನು ಜಾರಿಗೊಳಿಸಿ ಪುಣೆ ಮಹಾನಗರ ಪಾಲಿಕೆ ಇಂದು ಆದೇಶ ಹೊರಡಿಸಿದೆ. ಸಂಜೆ ಆರು ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೂ ಕರ್ಫ್ಯೂ ಜಾರಿಯಲ್ಲಿರುತ್ತದೆ. 

ಒಂದು ವಾರಗಳ ಕಾಲ ಧಾರ್ಮಿಕ ಸ್ಥಳಗಳು, ಹೋಟೆಲ್ ಗಳು, ಬಾರ್ ಗಳು, ಶಾಫಿಂಗ್ ಮಾಲ್ ಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಪುಣೆ ಮಹಾನಗರ ನಿಗಮದ ಬಸ್ ಸಂಚಾರವನ್ನು ಕೂಡಾ ಒಂದು ವಾರಗಳ ಕಾಲ ಸ್ಥಗಿತಗೊಳಿಸಲಾಗಿದೆ. 

ಕರ್ಫ್ಯೂ ಅವಧಿಯಲ್ಲಿ ಕೇವಲ ಹೋಮ್ ಡೆಲಿವರಿ, ಅತ್ಯಾವಶ್ಯಕ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ದೇಶದಲ್ಲಿ ಕೊರೋನಾ ಹೊಸ ಅಲೆಯಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಪುಣೆ ಕೂಡಾ ಒಂದಾಗಿದೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp