'ದೀದಿ' ಮತ್ತೊಂದು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಾರೆಯೇ?: ಮೋದಿ ಪ್ರಶ್ನೆಗೆ ಟಿಎಂಸಿ ಪ್ರತಿಕ್ರಿಯೆ ಹೀಗಿದೆ...

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಸೋಲುವ ಸಾಧ್ಯತೆ ಇರುವುದರಿಂದ ದೀದಿ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ಟಿಎಂಸಿ ಸ್ಪಷ್ಟನೆ ನೀಡಿದೆ. 

Published: 02nd April 2021 01:37 AM  |   Last Updated: 02nd April 2021 12:59 PM   |  A+A-


CM Mamata Banerjee

ಮಮತಾ ಬ್ಯಾನರ್ಜಿ

Posted By : Srinivas Rao BV
Source : The New Indian Express

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಸೋಲುವ ಸಾಧ್ಯತೆ ಇರುವುದರಿಂದ ದೀದಿ ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಚಿಂತಿಸುತ್ತಿದ್ದಾರೆ ಎಂಬ ಮೋದಿ ಹೇಳಿಕೆಗೆ ಟಿಎಂಸಿ ಸ್ಪಷ್ಟನೆ ನೀಡಿದೆ. 

ಮೋದಿ ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಟಿಎಂಸಿ ಪ್ರತಿಕ್ರಿಯೆ ನೀಡಿದ್ದು, ಮಮತಾ ಬ್ಯಾನರ್ಜಿ ಎರಡನೇ ಕ್ಷೇತ್ರದಿಂದ ಸ್ಪರ್ಧಿಸುತ್ತಿಲ್ಲ, ಇಂತಹ ಬುಡವಿಲ್ಲದ ಆರೋಪಗಳಿಗಾಗಿ ಪ್ರಧಾನಿ ಮೋದಿ ಕ್ಷಮೆ ಕೋರಬೇಕೆಂದು ಎಂದು ಹೇಳಿದೆ.

ಇನ್ನು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆ ಮುಕ್ತಾಯಗೊಂಡಿದ್ದು ಹಲವೆಡೆ ಬೂತ್ ಸೆರೆಹಿಡಿಯುವಿಕೆ ಹಾಗೂ ಘರ್ಷಣೆಯ ಆರೋಪಗಳು ಕೇಳಿಬಂದಿವೆ. ಪ್ರಮುಖವಾಗಿ ಚುನಾವಣೆಯ ಕೇಂದ್ರಬಿಂದುವಾಗಿರುವ ನಂದಿಗ್ರಾಮದಲ್ಲಿ ಶೇ.80 ರಷ್ಟು ಮತದಾನವಾಗಿದ್ದು ಈ ಕ್ಷೇತ್ರದಲ್ಲೂ ಘರ್ಷಣೆ ನಡೆದಿದೆ. 

ಕೇಸರಿ ಪಾಳಯದ ಬೆಂಬಲಿಗರು ಬೂತ್ ಗೆ ಮುತ್ತಿಗೆ ಹಾಕಿದ್ದರ ಪರಿಣಾಮವಾಗಿ ನಂದಿಗ್ರಾಮದ ಬೊಯಾಲ್ ನಲ್ಲಿ ಎರಡು ಗಂಟೆಗಳ ಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp