3ನೇ ಹಂತದ ಕೋವಿಡ್ ಲಸಿಕೆ ಅಭಿಯಾನ: ಮೊದಲ ದಿನ ಉತ್ತಮ ಪ್ರತಿಕ್ರಿಯೆ; ಲಸಿಕೆ ನೀಡುವ ಸಾಮರ್ಥ್ಯ, ವೇಗ ಹೆಚ್ಚಳಕ್ಕೆ ತಜ್ಞರ ಒತ್ತಾಯ

45 ವರ್ಷಕ್ಕಿಂತ ಮೇಲ್ಪಟ್ಟವರು ಎಲ್ಲರೂ ಕೋವಿಡ್-19 ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಬಹುದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿಯಾನ ದೇಶಾದ್ಯಂತ ಆರಂಭಗೊಂಡ ನಂತರ ಏಪ್ರಿಲ್ 1ರ ಮೊದಲ ದಿನವಾದ ನಿನ್ನೆ ಲಸಿಕೆ ಪಡೆದವರ ಸಂಖ್ಯೆ 20 ಲಕ್ಷ ದಾಟಿದೆ.

Published: 02nd April 2021 10:02 AM  |   Last Updated: 02nd April 2021 01:06 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ನವದೆಹಲಿ: 45 ವರ್ಷಕ್ಕಿಂತ ಮೇಲ್ಪಟ್ಟವರು ಎಲ್ಲರೂ ಕೋವಿಡ್-19 ಲಸಿಕೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿ ಬಹುದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿಯಾನ ದೇಶಾದ್ಯಂತ ಆರಂಭಗೊಂಡ ನಂತರ ಏಪ್ರಿಲ್ 1ರ ಮೊದಲ ದಿನವಾದ ನಿನ್ನೆ ಲಸಿಕೆ ಪಡೆದವರ ಸಂಖ್ಯೆ 20 ಲಕ್ಷ ದಾಟಿದೆ.

ನಿನ್ನೆ ರಾತ್ರಿ 10 ಗಂಟೆಯವರೆಗೆ ದೇಶಾದ್ಯಂತ 22 ಲಕ್ಷದ 94 ಸಾವಿರದ 254 ಮಂದಿ ಲಸಿಕೆ ಪಡೆದಿದ್ದು, 72 ಸಾವಿರ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆ.

ದೇಶಾದ್ಯಂತ ಕೊರೊನಾವೈರಸ್ ಲಸಿಕೆಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಕೇಂದ್ರ ಸರ್ಕಾರವು ಗೆಜೆಟೆಡ್ ರಜಾದಿನಗಳನ್ನು ಒಳಗೊಂಡಂತೆ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಕೋವಿಡ್-19 ವ್ಯಾಕ್ಸಿನೇಷನ್ ಕೇಂದ್ರಗಳನ್ನು (ಸಿವಿಸಿ) ಏಪ್ರಿಲ್ ಪೂರ್ತಿ ಕಾರ್ಯನಿರ್ವಹಿಸಲು ನಿರ್ಧರಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿನ್ನೆ ಪತ್ರ ಬರೆದಿದ್ದು, ಲಸಿಕೆ ನೀಡುವ ವೇಗ ಮತ್ತು ವ್ಯಾಪ್ತಿಯಲ್ಲಿ ತ್ವರಿತ ಹೆಚ್ಚಳ ಮಾಡಲು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ಎಲ್ಲಾ ಲಸಿಕಾ ಕೇಂದ್ರಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡುವಂತೆ ಕೇಳಿದೆ.

ದೇಶಾದ್ಯಂತ ಈವರೆಗೆ 6.75 ಕೋಟಿಗೂ ಹೆಚ್ಚು ಲಸಿಕೆಯನ್ನು ನೀಡಲಾಗಿದೆ. ಈ ಮಧ್ಯೆ, ದೇಶದ ಹಲವಾರು ಭಾಗಗಳಲ್ಲಿ ಅನೇಕ ಕಿರಿಯ ಫಲಾನುಭವಿಗಳು ಕೋವಿಡ್ ಲಸಿಕೆ ಪಡೆಯಲು ಬಹಳ ಸಮಯ ಬೇಕಾಗುತ್ತದೆ. ಮುಂಚಿತವಾಗಿ ನೋಂದಾಯಿಸಿದ ನಂತರವೂ ದೀರ್ಘ ಸಾಲಿನಲ್ಲಿ ಕಾಯಬೇಕಾಗುತ್ತದೆ ಎಂದು ಆರೋಪಿಸುತ್ತಾರೆ.

ಮತ್ತೊಂದೆಡೆ, ರಾಜ್ಯಗಳಲ್ಲಿನ ಅಧಿಕಾರಿಗಳು ಲಸಿಕೆ ಪ್ರಕ್ರಿಯೆಯ ಕೇಂದ್ರಬಿಂದುವಾಗಿರುವ ಕೋವಿನ್ ಪೋರ್ಟಲ್ ನಿಧಾನವಾಗಿದೆ ಎಂದು ಹೇಳುತ್ತಾರೆ. ಇದರ ಪರಿಣಾಮವಾಗಿ ದಾಖಲೆಗಳನ್ನು ಅಪ್‌ಲೋಡ್ ಮಾಡಲು ಮತ್ತು ಪರಿಶೀಲನೆಗೆ ಸಮಯ ಹಿಡಿಯುತ್ತದೆ ಎನ್ನುತ್ತಾರೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp