ಐಟಿ ದಾಳಿ ಮೂಲಕ ಹೆದರಿಸಲು ನಾವು ಎಐಎಡಿಎಂಕೆ ಅಲ್ಲ: ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ತಿರುಗೇಟು

ತಮ್ಮ ಮಗಳು ಸೆಂಥಮರೈ ಅವರ ಮನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ತಮ್ಮ ಪಕ್ಷಕ್ಕೆ ಅಂತಹ ವಿಧಾನಗಳ ಮೂಲಕ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

Published: 02nd April 2021 03:38 PM  |   Last Updated: 02nd April 2021 04:04 PM   |  A+A-


stalin1

ಸ್ಟಾಲಿನ್

Posted By : Lingaraj Badiger
Source : The New Indian Express

ಅರಿಯಲೂರ್: ತಮ್ಮ ಮಗಳು ಸೆಂಥಮರೈ ಅವರ ಮನೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು, ತಮ್ಮ ಪಕ್ಷಕ್ಕೆ ಅಂತಹ ವಿಧಾನಗಳ ಮೂಲಕ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಹೇಳಿದರು.

"ಐಟಿ ದಾಳಿಗಳ ಮೂಲಕ ಹೆದರಿಸಲು ನಾವು ಎಐಎಡಿಎಂಕೆ ಅಲ್ಲ. ನಾವು ಡಿಎಂಕೆ" ಎಂದು ಸ್ಟಾಲಿನ್ ತಿರುಗೇಟು ನೀಡಿದ್ದಾರೆ.

ಇಂದು ಅರಿಯಲೂರಿನ ಜಯಂಕೊಂಡಂನಲ್ಲಿ ಚುನಾವಣಾ ಪ್ರಚಾರ ನಡೆಸಿದ ಸ್ಟಾಲಿನ್, "ನಾನು ಇಂದು ಬೆಳಗ್ಗೆ ಪ್ರಚಾರ ಸ್ಥಳಕ್ಕೆ ಹೋಗುವಾಗ, ಚೆನ್ನೈನ ನನ್ನ ಮಗಳ ಮನೆ ಮೇಲೆ ಐಟಿ ದಾಳಿ ನಡೆಯುತ್ತಿರುವ ವಿಷಯ ತಿಳಿಯಿತು. ಸುಮಾರು 100 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ ನಂತರ 30 ಐಟಿ ಅಧಿಕಾರಿಗಳು ಈ ದಾಳಿ ನಡೆಸುತ್ತಿದ್ದಾರೆ. ಎಐಎಡಿಎಂಕೆ ನಾಯಕರ ಕಚೇರಿಗಳ ಮೇಲೆ ಇದೇ ರೀತಿಯ ದಾಳಿಗಳನ್ನು ನಡೆಸಲಾಗಿದ್ದು, ಆ ಮೂಲಕ ಅವರು ನಮ್ಮ ಪಕ್ಷವನ್ನು ನಿಯಂತ್ರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅವರು ನಮಗೆ ಬೆದರಿಕೆ ಹಾಕಲು ಸಿಬಿಐ ಮತ್ತು ಐಟಿ ಇಲಾಖೆಯನ್ನು ಬಳಸುತ್ತಿದ್ದಾರೆ. ಈ ದಾಳಿಗಳ ಮೂಲಕ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ನಾನು ಮೋದಿಗೆ ಹೇಳಲು ಬಯಸುತ್ತೇನೆ. ನಾನು ಮಿಸಾ ಕಾಯ್ದೆ (ತುರ್ತು ಪರಿಸ್ಥಿತಿ) ಎದುರಿಸಿದ್ದೇನೆ. ಹೀಗಾಗಿ ನಿಮ್ಮ ಈ ದಾಳಿಗಳಿಗೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಟಾಲಿನ್ ಪುತ್ರಿ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp