ತೆಲಂಗಾಣ: ಕೋವಿಡ್-19 ಲಸಿಕೆಯ ಎರಡೂ ಡೋಸ್ ಪಡೆದ ನಂತರವೂ 15 ಮಂದಿಗೆ ಸೋಂಕು!

ತೆಲಂಗಾಣದಲ್ಲಿ ಕೋವಿಡ್-19 ಸೋಂಕಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ 15 ಮಂದಿಗೆ ಸೋಂಕು ತಗುಲಿದೆ.

Published: 03rd April 2021 09:55 AM  |   Last Updated: 03rd April 2021 03:17 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಹೈದರಾಬಾದ್: ತೆಲಂಗಾಣದಲ್ಲಿ ಕೋವಿಡ್-19 ಸೋಂಕಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ 15 ಮಂದಿಗೆ ಸೋಂಕು ತಗುಲಿದೆ.

ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ ಮೇಲೆ ಕೂಡ ಸೋಂಕು ಬಂದಿದೆ. ಆದರೆ ಎಲ್ಲಾ ರೋಗಿಗಳಲ್ಲಿ ಸೋಂಕಿನ ತೀವ್ರತೆ ಸಣ್ಣ ಮಟ್ಟದಿಂದ ಮಧ್ಯಮ ಮಟ್ಟದವರೆಗೆ ಇದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕನಿಷ್ಠ 15 ಮಂದಿಗೆ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ ನಂತರ ಕೂಡ ಸೋಂಕು ತಗುಲಿದೆ. ಹಾಗೆಂದು ಇದಕ್ಕೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯವಾದ ಲಸಿಕೆ ಪಡೆದುಕೊಂಡ ನಂತರ ಬರುವ ಅನಾರೋಗ್ಯವಾಗಿದೆ ಎಂದು ಸಾರ್ವಜನಿಕ ಆರೋಗ್ಯದ ನಿರ್ದೇಶಕ ಡಾ ಜಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಲಸಿಕೆಗಳು ನಾಗರಿಕರ ದೇಹದಲ್ಲಿ ಶೇಕಡಾ 71ರಿಂದ ಶೇಕಡಾ 81ರಷ್ಟು ಕೆಲಸ ಮಾಡುತ್ತದೆ. ಉಳಿತ ಶೇಕಡಾ 20ರಿಂದ ಶೇಕಡಾ 30ರಷ್ಟು ಮಂದಿ ಲಸಿಕೆ ಪಡೆದ ನಂತರವೂ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ. ಭಾರತದಲ್ಲಿ ಸಿಗುವ ಲಸಿಕೆಗಳು ಶೇಕಡಾ 100ರಷ್ಟು ಸಾಮರ್ಥ್ಯವನ್ನು ಹೊಂದಿಲ್ಲ, ಅದರರ್ಥ ಜನಸಂಖ್ಯೆಯ ಸಣ್ಣ ಪ್ರಮಾಣ ಮತ್ತೆ ಕೊರೋನಾ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ, ಹಾಗೆಂದು ಅಸಡ್ಡೆಮಾಡಿ ಕೊರೋನಾ ಲಸಿಕೆ ಹಾಕಿಸಿಕೊಳ್ಳದೆ ಇರಬೇಡಿ ಎಂದು ಡಾ ಶ್ರೀನಿವಾಸ್ ರಾವ್ ಹೇಳುತ್ತಾರೆ.

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp