ಹಣಕ್ಕಾಗಿ ತಾಯಿಯನ್ನು ಇಟ್ಟಿಗೆಯಿಂದ ಹೊಡೆದು ಕೊಂದ ಕುಡುಕ ಮಗ! 

ಹಣದ ವಿಷಯಕ್ಕಾಗಿ ಹೆತ್ತ ತಾಯಿಯನ್ನು ಮಗ ಇಟ್ಟಿಗೆಯಿಂದ ಹೊಡೆದು ಕೊಂದಿರುವ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ.

Published: 03rd April 2021 01:17 AM  |   Last Updated: 03rd April 2021 01:17 AM   |  A+A-


murder (image for representational purpose only)

ಹತ್ಯೆ (ಸಾಂಕೇತಿಕ ಚಿತ್ರ)

Posted By : Srinivas Rao BV
Source : The New Indian Express

ಜೈಪುರ: ಹಣದ ವಿಷಯಕ್ಕಾಗಿ ಹೆತ್ತ ತಾಯಿಯನ್ನು ಮಗ ಇಟ್ಟಿಗೆಯಿಂದ ಹೊಡೆದು ಕೊಂದಿರುವ ಘಟನೆ ರಾಜಸ್ಥಾನದ ಕೋಟದಲ್ಲಿ ನಡೆದಿದೆ. 

ರಾಜ್ಕುಮಾರಿ ಬೈರ್ವಾ (65) ಮೃತ ದುರ್ದೈವಿಯಾಗಿದ್ದು, ಹೊಡೆತದ ಪರಿಣಾಮ ತೀವ್ರ ಗಾಯಗಳುಂಟಾಗಿ ಕೋಮಾದಲ್ಲಿದ್ದ ಮಹಿಳೆಗೆ ಮಹಾರಾವ್ ಭೀಮ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.  ಎರಡು ದಿನಗಳ ನಂತರ ಸಾವನ್ನಪ್ಪಿದ್ದಾರೆ. 

ಆರೋಪಿ ಶಶಿಕಾಂತ್ (35) ಮದ್ಯಪಾನದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾನೆ. ಹಣದ ವಿಷಯಕ್ಕಾಗಿ ಇಬ್ಬರ ನಡುವೆಯೂ ಆಗಾಗ್ಗೇ ಘರ್ಷಣೆಗಳುಂಟಾಗಿ, ತಾಯಿಯನ್ನು ಈತ ಥಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಹಣ ಕೊಡುವುದಕ್ಕೆ ಮಹಿಳೆ ನಿರಾಕರಿಸಿದ ಹಿನ್ನೆಲೆಯಲ್ಲಿ ಇಟ್ಟಿಗೆಯಿಂದ ಹೊಡೆದಿದ್ದಾನೆ. ಮೃತ ಮಹಿಳೆಗೆ ಇಬ್ಬರು ಗಂಡುಮಕ್ಕಳಿದ್ದು, ಪತಿ ಬಾಬುಲಾಲ್ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ಆತ ಮೃತಪಟ್ಟ ನಂತರ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದರು. ಹಿರಿಯ ಮಗ ಅಜ್ಮೀರ್ ನಲ್ಲಿ ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp