2021-22 ರ ಶೈಕ್ಷಣಿಕ ವರ್ಷದಲ್ಲಿ 9-12 ನೇ ಸಿಬಿಎಸ್ಇ ತರಗತಿಗಳ ಪಠ್ಯಕ್ರಮ ಕಡಿತ ಇಲ್ಲ!

2021-22 ರ ಶೈಕ್ಷಣಿಕ ವರ್ಷದಲ್ಲಿ 9-12 ನೇ ತರಗತಿಗಳ ಪಠ್ಯಕ್ರಮವನ್ನು ಕಡಿತಗೊಳಿಸದೇ ಇರಲು ಸಿಬಿಎಸ್ಇ ನಿರ್ಧರಿಸಿದೆ.

Published: 03rd April 2021 03:16 AM  |   Last Updated: 03rd April 2021 03:16 AM   |  A+A-


CBSE not to reduce syllabus for students of classes 9-12 for academic year 2021-22

2021-22 ರ ಶೈಕ್ಷಣಿಕ ವರ್ಷದಲ್ಲಿ 9-12 ನೇ ಸಿಬಿಎಸ್ಇ ತರಗತಿಗಳ ಪಠ್ಯಕ್ರಮ ಕಡಿತ ಇಲ್ಲ!

Posted By : Srinivas Rao BV
Source : The New Indian Express

2021-22 ರ ಶೈಕ್ಷಣಿಕ ವರ್ಷದಲ್ಲಿ 9-12 ನೇ ತರಗತಿಗಳ ಪಠ್ಯಕ್ರಮವನ್ನು ಕಡಿತಗೊಳಿಸದೇ ಇರಲು ಸಿಬಿಎಸ್ಇ ನಿರ್ಧರಿಸಿದೆ. 

ಕಳೆದ ವರ್ಷ ಕೊರೋನಾ, ಲಾಕ್ ಡೌನ್ ಕಾರಣಗಳಿಂದಾಗಿ 9-12 ನೇ ತರಗತಿ ವಿದ್ಯಾರ್ಥಿಗಳಿಗೆ ಶೇ.30 ರಷ್ಟು ಪಠ್ಯಕ್ರಮವನ್ನು ಕಡಿತಗೊಳಿಸಲಾಗಿತ್ತು. ಲಾಕ್ ಡೌನ್ ಅವಧಿಯಲ್ಲಿ ಶಾಲೆಗಳು ಬಂದ್ ಆಗಿ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಆನ್ ಲೈನ್ ನಲ್ಲಿ ನಡೆಯುತ್ತಿದ್ದರಿಂದ ಕಳೆದ ವರ್ಷ ಈ ಕ್ರಮ ಕೈಗೊಳ್ಳಲಾಗಿತ್ತು. ಕಡಿತಗೊಳಿಸಲಾಗಿದ್ದ ಪಠ್ಯಕ್ರಮ ಅಧ್ಯಯನ ಮಾಡಿದ್ದ ವಿದ್ಯಾರ್ಥಿಗಳು ಮೇ-ಜೂನ್ ತಿಂಗಳಲ್ಲಿ ಪರೀಕ್ಷೆಗಳನ್ನು ಬರೆಯಲಿದ್ದಾರೆ. 

ಕಳೆದ ವರ್ಷ ಪಠ್ಯಕ್ರಮಗಳಿಂದ ಕೈಬಿಡಲಾಗಿದ್ದ ವಿಷಯಗಳನ್ನು ಈ ಬಾರಿ ಪುನಃ ಸೇರ್ಪಡೆಗೊಳಿಸಲಾಗಿದೆ ಎಂದು ಸಿಬಿಎಸ್ಇ ತಿಳಿಸಿದೆ. ಸಿಬಿಎಸ್ಇ ಪಠ್ಯಕ್ರಮದಲ್ಲಿ ಕಳೆದ ವರ್ಷ ಪೌರತ್ವ, ಜಾತ್ಯತೀತತೆ, ರಾಷ್ಟ್ರೀಯತೆ ಮತ್ತು ಫೆಡರಲಿಸಂ ಕುರಿತ ಪಾಠಗಳನ್ನು ಕೈಬಿಡಲಾಗಿತ್ತು.


Stay up to date on all the latest ರಾಷ್ಟ್ರೀಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp