ಡಿಎಂಕೆ ಸ್ಟಾರ್ ಪ್ರಚಾರಕಿ, ಸಂಸದೆ ಕನಿಮೋಳಿಗೆ ಕೊರೋನಾ ಪಾಸಿಟಿವ್
ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೂ ಮೂರೇ ದಿನಗಳು ಬಾಕಿ ಇರುವಂತೆ ಡಿಎಂಕೆ ಸ್ಟಾರ್ ಪ್ರಚಾರಕಿ ಮತ್ತು ತೂತುಕುಡಿ ಸಂಸದೆ ಕನಿಮೋಳಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
Published: 03rd April 2021 04:40 PM | Last Updated: 03rd April 2021 04:40 PM | A+A A-

ಕನಿಮೋಳಿ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೂ ಮೂರೇ ದಿನಗಳು ಬಾಕಿ ಇರುವಂತೆ ಡಿಎಂಕೆ ಸ್ಟಾರ್ ಪ್ರಚಾರಕಿ ಮತ್ತು ತೂತುಕುಡಿ ಸಂಸದೆ ಕನಿಮೋಳಿ ಅವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಕಳೆದ ಕೆಲವು ದಿನಗಳಿಂದ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಕನಿಮೋಳಿ ಅವರು ಇತ್ತೀಚಿಗೆ ತಿರುನೆಲ್ವೇಲಿ ಮತ್ತು ತೆಂಕಸಿಯಲ್ಲಿವೆ ಚುನಾವಣಾ ರ್ಯಾಲಿ ನಡೆಸಿದ್ದರು.
234 ಸದಸ್ಯ ಬಲ ಹೊಂದಿರುವ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ತಮಿಳುನಾಡು ಆರೋಗ್ಯ ಇಲಾಖೆಯ ಪ್ರಕಾರ, ರಾಜ್ಯದಲ್ಲಿ ಶುಕ್ರವಾರ 3,290 ಕೊರೋನಾ ಪಾಸಿಟಿವ್ ಪ್ರಕರಣಗಳು ಮತ್ತು 12 ಸಾವುಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 8,92,780ಕ್ಕೆ ಮತ್ತು ಸಾವಿನ ಸಂಖ್ಯೆ 12,750ಕ್ಕೆ ಏರಿಕೆಯಾಗಿದೆ.