ಕಾರಿನಲ್ಲಿ ಸ್ಫೋಟಕ ಪತ್ತೆ ಕೇಸ್:  ಸಚಿನ್ ವಾಜೆ ಬಳಸಿದ್ದ ಮತ್ತೊಂದು ಮರ್ಸಿಡಿಸ್ ಕಾರು ಎನ್ ಐಎ ವಶಕ್ಕೆ!

ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಎಸ್ ಯುವಿ ಕಾರಿನಲ್ಲಿ ಸ್ಫೋಟಕ ಪತ್ತೆ ಕೇಸ್ ನ ಪ್ರಮುಖ ಆರೋಪಿ ಆಗಿರುವ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸಿರಬಹುದು ಎನ್ನಲಾದ ಮತ್ತೋಂದು ಹೈ ಎಂಡ್ ಕಾರನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

Published: 03rd April 2021 01:40 PM  |   Last Updated: 03rd April 2021 01:45 PM   |  A+A-


The_cars_that_have_been_seized_by_NIA1

ಎನ್ ಐಎ ವಶಕ್ಕೆ ಪಡೆದಿರುವ ಕಾರುಗಳು

Posted By : Nagaraja AB
Source : The New Indian Express

ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಎಸ್ ಯುವಿ ಕಾರಿನಲ್ಲಿ ಸ್ಫೋಟಕ ಪತ್ತೆ ಕೇಸ್ ನ ಪ್ರಮುಖ ಆರೋಪಿ ಆಗಿರುವ ಅಮಾನತುಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಳಸಿರಬಹುದು ಎನ್ನಲಾದ ಮತ್ತೋಂದು ಹೈ ಎಂಡ್ ಕಾರನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

 ಈ ಬಾರಿ ಬಿಳಿ ಬಣ್ಣದ ಮರ್ಸಿಡಿಸ್ ಕಾರನ್ನು ರಾಯಗಡ ಜಿಲ್ಲೆಯ ಪನ್ವೇಲ್ ಬಳಿ ಪತ್ತೆ ಮಾಡಲಾಗಿದೆ. ವಿಚಾರಣೆ ಅಂಗವಾಗಿ
ಎನ್ ಐಎ ವಶಕ್ಕೆ ಪಡೆದಿರುವ 8ನೇ ಕಾರು ಇದಾಗಿದೆ. ಈ ಕಾರಿಗೂ ವಾಜೆ ಪ್ರಕರಣ ಅಥವಾ ಥಾಣೆ ಉದ್ಯಮಿ ಮನ್ಸುಖ್  ಹಿರೆನ್ ಸಾವಿನ ಪ್ರಕರಣಗಳಿಗೂ ಸಂಬಂಧವಿದೆಯೇ ಎಂಬುದನ್ನು ಕಂಡುಹಿಡಿಯಲು ಎನ್ ಐಎ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ಈ ಹಿಂದೆ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಹಾಗೂ ಬೆದರಿಕೆ ಪತ್ರ ಇಟ್ಟಿದ್ದ ಎಸ್ ಯುವಿ ಸ್ಕಾರ್ಪಿಯೊ,  ಒಂದು ಇನ್ನೋವಾ, ಎರಡು ಮರ್ಸಿಡಿಸ್  ಬೆಂಜ್, ಹಾಗೂ ಒಂದೊಂದು ಬ್ಲಾಕ್ ವೊಲ್ವೊ, ಲ್ಯಾಂಡ್ ಕ್ರೂಸರ್ ಪ್ರಾಡೊ, ವೈಟ್ ಮಿತ್ಸುಬಿಶಿ ಔಟ್ ಲ್ಯಾಂಡರ್ ಕಾರನ್ನು ಎನ್ ಐಎ ಈಗಾಗಲೇ ವಶಕ್ಕೆ ಪಡೆದುಕೊಂಡಿದೆ.

ದಕ್ಷಿಣ ಮುಂಬೈನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಾಜೆ, ಇನ್ನೊಬ್ಬ ಆರೋಪಿಗಳೊಂದಿಗೆ ಅಪರಿಚಿತ ಸ್ಥಳಕ್ಕೆ ಹೋಗುತ್ತಿರುವ ಆಡಿ ವಾಹನವನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ. ಕಾರುಗಳಲ್ಲದೆ,  ಹಲವಾರು ನಕಲಿ ನೋಂದಣಿ ನಂಬರ್‌ ಪ್ಲೇಟ್‌ಗಳು, ಕೆಲವು ಬ್ಯಾಗ್‌ಗಳು, 500,000 ರೂ. ನಗದು, ಹಣ ಎಣಿಸುವ ಯಂತ್ರಗಳು, ಬಟ್ಟೆ ಇತ್ಯಾದಿಗಳನ್ನು ವಾಹನಗಳು, ಚಾಲಕರಿಂದ ಎನ್ ಐಎ ವಶಕ್ಕೆ ಪಡೆದುಕೊಂಡಿದೆ.


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp